ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ( Karnataka Assembly Election ) ವರ್ಷ ಬಾಕಿಯಿರುವಾಗಲೇ, ಬಿಜೆಪಿ ಪಕ್ಷಕ್ಕೆ ( BJP Party ) ಸಂಘಟನೆ ಚುರುಕುಗೊಳಿಸಿದೆ. ಈ ಬೆನ್ನಲ್ಲೇ ಬೇರೆ ಪಕ್ಷಗಳಿಂದ ರಾಜಕೀಯ ನಾಯಕರನ್ನು ಸೆಳೆಯುವ ಕಾರ್ಯವನ್ನು ಮುಂದುವರೆಸಿದೆ.
ಮಂಡ್ಯ ಹಾಗೂ ಕೋಲಾರ ಜಿಲ್ಲೆಯಲ್ಲಿ ಪಕ್ಷ ಬಲ ಪಡಿಸೋ ನಿಟ್ಟಿನಲ್ಲಿ ಮಹತ್ವದ ತಂತ್ರ ಹೆಣೆದಿದೆ. ಈ ನಿಟ್ಟಿನಲ್ಲಿಯೇ ಇಂದು ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಮಾಜಿ ಶಾಸಕ ಮಂಜುನಾಥ್ ಗೌಡ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ನಗರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ), ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ( Nalin Kumar Kateel ) ನೇತೃತ್ವದಲ್ಲಿ ಇಂದು ಮಹತ್ವದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಸಚಿವರಾದಂತ ಡಾ.ಕೆ.ಸುಧಾಕರ್, ಮುನಿರತ್ನ, ಗೋಪಾಲಯ್ಯ ಸಮ್ಮುಖದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಮಾಜಿ ಶಾಸಕ ಮಂಜುನಾಥ್ ಬಿಜೆಪಿ ಸೇರ್ಪಡೆಗೊಂಡರು.