Breaking News

ಹಿರಿಯ ರಂಗ ಕಲಾವಿದೆ ಲಕ್ಷ್ಮೀ ಬಾಯಿ ಏಣಗಿ ನಿಧನ

Spread the love

ಧಾರವಾಡ: ಪ್ರಸಿದ್ದ ರಂಗ ಕಲಾವಿದೆ ಹಾಗೂ ದಿ. ಏಣಗಿ ಬಾಳಪ್ಪ ಅವರ ಧರ್ಮ ಪತ್ನಿ ಶ್ರೀಮತಿ ಲಕ್ಷ್ಮಿಬಾಯಿ ಬಾಳಪ ಏಣಗಿ (96) ಮಂಗಳವಾರ ಇಲ್ಲಿನ ರಜತಗಿರಿ ನಿವಾಸದಲ್ಲಿ ನಿಧನರಾದರು.

ಅವರ ಅಂತ್ಯ ಕ್ರಿಯೆ ಇಂದು ಮಧ್ಯಾಹ್ನ 2:೦೦ ಗಂಟೆಗೆ ಹೋಸಯಲಾಪೂರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

 

ಚಿತ್ರನಟ ದಿ. ನಟರಾಜ ಏಣಗಿ ಹಾಗೂ ಓರ್ವಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.

1940-50 ರ ದಶಕದಲ್ಲಿ ಕನ್ನಡ ಮತ್ತು ಮರಾಠಿ ರಂಗಭೂಮಿಯಲ್ಲಿ ಪ್ರಸಿದ್ದ ನಟಿಯಾಗಿದ್ದ ಅವರು ಕರ್ನಾಟಕದ ಏಕೀಕರಣ ಚಳುವಳಿ ಆರಂಭವಾದಾಗ ತಮ್ಮ ನಾಟಕಗಳ ಮೂಲಕವೇ ಕನ್ನಡ ಕಟ್ಟುವ ಕೆಲಸ ಮಾಡಿದರು.

ಸಿಂಗಾರೆವ್ವ ಮತ್ತು ಅರಮನೆ ಸೇರಿದಂತೆ ಹತ್ತಾರು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅವರು ಇಡೀ ತಮ್ಮ ಜೀವನವನ್ನೇ ರಂಗಭೂಮಿಗಾಗಿ ಮುಡುಪಾಗಿಟ್ಟಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನೂರಕ್ಕೂ ಹೆಚ್ಚು ರಂಗ ಸನ್ಮಾನಗಳು ಅವರ ಮುಡಿಗೇರಿದ್ದವು.


Spread the love

About Laxminews 24x7

Check Also

ಮೊಹರಂ ನೃತ್ಯದಲ್ಲೂ ಕಂಡು ಬಂದ ಆರ್.ಸಿ.ಬಿ ಅಭಿಮಾನ

Spread the love ಮೊಹರಂ ನೃತ್ಯದಲ್ಲೂ ಕಂಡು ಬಂದ ಆರ್.ಸಿ.ಬಿ ಅಭಿಮಾನ ಉಗರಗೋಳ, ಚಿಕ್ಕುಂಬಿಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸವದತ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ