ನವದೆಹಲಿ ಏಪ್ರಿಲ್ 30: ಹುಬ್ಬಳ್ಳಿ ಗಲಭೆ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹರಿಹಾಯದಿದ್ದಾರೆ. ‘ಹುಬ್ಬಳ್ಳಿ ಗಲಭೆ ಪ್ರಕಾರದಲ್ಲಿ ಬಂಧಿತರ ನೆರವಿಗೆ ಧಾವಿಸಿರುವುದು ಶಾಸಕ ಜಮೀರ್ ಅಹಮದ್ ಹಾಗೂ ಅವರ ಪಕ್ಷದ ನಿಲುವು ಆಗಿದೆ.
ಗಲಭೆ ಮಾಡಿದವ ಜೊತೆ ನಿಲ್ಲುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡೇ ಬಂದಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನವದೆಹಲಿಗೆ ಆಗಮಿಸಿ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹುಬ್ಬಳ್ಳಿ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರು ಬಂಧಿತರ ನೆರವಿಗೆ ಧಾವಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಇದು ಮೊದಲ ಬಾರಿ ಏನಲ್ಲ. ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣದಲ್ಲಿಯೂ ಅದನ್ನೇ ಮಾಡಿದ್ದರು. ಅದು ಅವರ ಮತ್ತು ಅವರ ಪಕ್ಷದ ನಿಲುವು. ಅವರು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಅವರ ನಾಯಕರು ಅದರ ಬಗ್ಗೆ ಯಾವುದೇ ಸ್ಪಷ್ಟೀಕರಣ ಕೂಡ ನೀಡದೇ ಇರುವುದರಿಂದ ಅವರ ನಿಲುವು ತಿಳಿಯುತ್ತದೆ’ ಎಂದರು.
ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪಿ.ಎಫ್.ಐ, ಎಸ್.ಡಿ.ಪಿ.ಐ ಸಂಘಟನೆಗಳನ್ನು ಬ್ಯಾನ್ ಮಾಡುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ಚರ್ಚೆಯಾಗುವುದಿಲ್ಲ. ಪಿ.ಎಫ್.ಐ ಕರ್ನಾಟಕದಲ್ಲಿ ಮಾತ್ರವಲ್ಲ ಅವರ ಚಟುವಟಿಕೆಗಳು ಸೀಮಿತವಾಗಿಲ್ಲ. ಉತ್ತರಪ್ರದೇಶ, ಕೇರಳ ಮಹಾರಾಷ್ಟ್ರದಲ್ಲಿಯೂ ಇದೆ. ಅದರ ಸಮಗ್ರ ಚಟುವಟಿಕೆಗಳ ಗೃಹ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದರು.
ಇನ್ನೂ ಇದೇ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಸುಮ್ನೆ ಏನೇನೋ ಮಾತಾಡೋದಲ್ಲ. ನಮ್ಮ ಕಾಲದಲ್ಲೂ ಪಿಎಸ್‌ಐ ನೇಮಕಾತಿ ಆಯ್ತು. ಬೇರೆ ಬೇರೆ ನೇಮಕಾತಿಗಳಾದವು. ಆಗೆಲ್ಲ ಇಂತಹ ಭ್ರಷ್ಟಾಚಾರ ನಡೆದಿತ್ತ ? ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ, ಅಕ್ರಮಗಳು ಹೆಚ್ಚಾಗಿವೆ’ ಎಂಬುದಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಮೈಸೂರಿನ ಟಿ. ನರಸೀಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದಂತ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಸ್ಲಿಂಮರ ಮಟನ್ ಸ್ಟಾಲ್, ಕಸಾಯಿಖಾನೆ ಮುಚ್ಚಲು ನೋಟಿಸ್ ಕೊಟ್ಟಿರುವ ವಿಚಾರ. ಕೇವಲ ಮುಸ್ಲಿಮರನ್ನೇ ಯಾಕೆ ಟಾರ್ಗೆಟ್ ಮಾಡ್ತಿರಾ. ಒಂದು ಧರ್ಮ, ಒಂದು ಜಾತಿ ಟಾರ್ಗೆಟ್ ಮಾಡಬೇಡಿ. ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತಿದ್ದರೆ ಮಾಡಿ ಎಂದರು.