Breaking News

ಕುಮಟಾದ ಪ್ರತೀಕ್ಷಾಗೆ ಒಂಬತ್ತು ಚಿನ್ನ

Spread the love

ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಕುಮಟದ ಪ್ರತೀಕ್ಷಾ ಜೆ.ಪೈ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ 2022ನೇ ಸಾಲಿನ ಘಟಿಕೋತ್ಸವದಲ್ಲಿ ಒಟ್ಟು 9 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಫಿಸಿಯಾಲಜಿ, ಬಯೋಕೆಮಿಸ್ಟ್ರಿ, ಮೈಕ್ರೋಬಯಾಲಜಿ, ಪೆಥಾಲಜಿ, ಫೋರೆನ್ಸಿಕ್‌ ಮೆಡಿಸಿನ್‌, ಕಮ್ಯುನಿಟಿ ಮೆಡಿಸಿನ್‌, ಜನರಲ್‌ ಮೆಡಿಸಿನ್‌, ಜನರಲ್‌ ಸರ್ಜರಿ ಮತ್ತು ಪೀಡಿಯಾಟ್ರಿಕ್ಸ್‌ ವಿಷಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

 

ಮೊದಲನೇ, ಎರಡನೇ ಹಾಗೂ ಅಂತಿಮ ವರ್ಷದ ಎಂಬಿಬಿಎಸ್‌ನಲ್ಲಿ ಸಮಗ್ರ ಪ್ರಶಸ್ತಿ ಪಡೆದಿರುವ ಅವರಿಗೆ ಪೆಥಾಲಜಿ ಹಾಗೂ ಮೈಕ್ರೋಬಯಾಲಜಿ ವಿಭಾಗದಿಂದ ನೀಡಲಾಗುವ ನಗದು ಪುರಸ್ಕಾರ, ಎನ್‌.ವೀರಯ್ಯ, ಡಾ.ಎಚ್‌.ಗೀತಾ, ಡಾ.ಬಿ.ಎನ್‌.ಲಿಂಗರಾಜು, ಡಾ.ಎಲ್‌.ಜಿ.ಹಾವನೂರು ಮತ್ತು ಸುಶೀಲಮ್ಮ ಹಾವನೂರು ಅವರ ಹೆಸರಿನಲ್ಲಿ ನೀಡುವ ವಿಶೇಷ ಪ್ರಶಸ್ತಿಗಳೂ ಲಭಿಸಿವೆ.

‘ಐದೂವರೆ ವರ್ಷಗಳ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಮೊದಲನೇ ವರ್ಷದಿಂದಲೂ ಓದಿನಲ್ಲಿ ಸ್ಥಿರತೆ ಕಾಪಾಡಿಕೊಂಡು ಬಂದಿದ್ದೆ. ಅಂತಿಮ ವರ್ಷದಲ್ಲಿ ಪಠ್ಯದ ಜೊತೆಗೆ ಪ್ರಾಯೋಗಿಕ ಪರೀಕ್ಷೆಯೂ ಇತ್ತು. ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಒತ್ತಡ ಮುಕ್ತಳಾಗುತ್ತಿದ್ದೆ’ ಎಂದು ಪ್ರತೀಕ್ಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಸಮಯದಲ್ಲಿ ಪಿಪಿಇ ಕಿಟ್‌ಗಳನ್ನು ಧರಿಸಿಕೊಂಡೇ ಕೆಲಸ ಮಾಡುವುದು ಸವಾಲೆನಿಸಿತ್ತು. ಇದು ನಮಗೆ ಹೊಸ ಅನುಭವವನ್ನೂ ನೀಡಿತು’ ಎಂದು ಹೇಳಿದರು.

‘ಮಗಳು ಏನೇ ಕೆಲಸ ಮಾಡಿದರೂ ಅದರಲ್ಲಿ ಪರಿಪೂರ್ಣತೆ ಇರುತ್ತಿತ್ತು. ಆಕೆಯ ಸಾಧನೆಯಿಂದ ಹೆಮ್ಮೆಯಾಗಿದೆ’ ಎಂದು ಪ್ರತೀಕ್ಷಾ ಅವರ ತಾಯಿ ಭಾರತಿ ಸಂತಸ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ