Breaking News

ಝಮೀರ್ ಅಹ್ಮದ್ ಗೆ ಬಿಜೆಪಿಯ ಒಬ್ಬ ಮಹಾನಾಯಕನ ಬೆಂಬಲ ಇದೆ: ಶಾಸಕ ಯತ್ನಾಳ್

Spread the love

ವಿಜಯಪುರ: ಹಳೇ ಹುಬ್ಬಳ್ಳಿ ದಾಂಧಲೆ ಪ್ರಕರಣದ ಆರೋಪಿಗಳಿಗೆ ಶಾಸಕ ಝಮೀರ್ ಅಹ್ಮದ್ ಅವರು ಆಹಾರದ ಕಿಟ್ ವಿತರಣೆ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಬಸನಗೌಡ ಪಾಟೀಲ್​ ಯತ್ನಾಳ್​ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶಾಸಕ ಝಮೀರ್‌ ನನ್ನು ಒದ್ದು ಒಳಗೆ ಹಾಕಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ.

 

​’ಝಮೀರ್ ಹಿಂದೂ ವಿರೋಧಿ ಹಾಗೂ ನಮ್ಮ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಾರೆ. ಝಮೀರ್‌ಗೆ ನಮ್ಮ ಸರ್ಕಾರದ ಸಲುಗೆ ಇದೆ, ಎಲ್ಲಾ ಹೊಂದಾಣಿಕೆ ಇದೆ. ಝಮೀರ್ ಅಹ್ಮದ್ ವಿರುದ್ಧ ಕೇಸ್ ದಾಖಲು ಮಾಡಬೇಕು. ಬಿಜೆಪಿಯಲ್ಲಿ ಮಹಾನಾಯಕನ ಬೆಂಬಲ ಝಮೀರ್​ ಗೆ ಇದೆ, ಅವರದ್ದೆಲ್ಲ ಒಂದೇ ಬ್ಯುಸಿನೆಸ್’ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ