ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣ ಕುರಿತಂತೆ ಶೀಘ್ರವೇ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿಯವರು ನೀಡಿದ್ದ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುವುದು ಬೇಡ ಮೊದಲು ಕ್ರಮ ಕೈಗೊಂಡು ಮಾತನಾಡಲಿ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ್‍ರವರು, ಹುಬ್ಬಳ್ಳಿಯಲ್ಲಿ ಹಿಂಸಾಚಾರದಲ್ಲಿ ತೊಡಗಿರುವವರ ಮೇಲೆ ಉತ್ತರ ಪ್ರದೇಶ ಮಾದರಿಯಲ್ಲಿ ಜೆಸಿಬಿ ಸದ್ದು ಮಾಡಬೇಕೆಂದು ಶಾಸಕ ಯತ್ನಾಳ್ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳು ಈ ಘಟನೆ ಸಂಬಂಧ ಶೀಘ್ರವೇವೇ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ಏನ್ರೀ ಶೀಘ್ರ ಕ್ರಮ ಕೈಗೊಳ್ಳುವುವದು. ಎಲ್ಲವೂ ಸುಟ್ಟು ಹೋದ ಮೇಲೆ ನೀವೇನು ಕ್ರಮ ಕೈಗೊಳ್ಳುವುವು. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಧೈರ್ಯ ತೆಗೆದುಕೊಳ್ಳಬೇಕು. ಈ ಕುರಿತು ಸಿಎಂ ಪಟಾ ಪಟಾ ಕ್ರಮ ಕೈಗೊಳ್ಳಿ, ಘಟನೆಯಲ್ಲಿ ಭಾಗಿಯಾದವರ ಆಸ್ತಿಯನ್ನು ಧಡ ಧಡ ಕೆಡವಿ ಆರೋಪಿಗಳನ್ನು ಒದ್ದು ಒಳಗೆ ಹಾಕಿ. ಸಿಗದೇ ಓಡುವವರನ್ನು ಎನ್‍ಕೌಂಟರ್ ಮಾಡಿ ಬಿಸಾಕಿ ಎಂದು ಉತ್ತರ ಕರ್ನಾಟಕ ಶೈಲಿಯಲ್ಲಿಯೇ ಗುಡುಗಿದರು.
ಇನ್ನು ಇದೇ ವೇಳೆ ಹುಬ್ಬಳ್ಳಿಯಲ್ಲಿ ಪಲೀಸರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿಯೂ ಕೂಡ ಜೆಸಿಬಿ ಸದ್ದು ಮಾಡಬೇಕು. ಇಲ್ಲವಾದ್ರೆ ಇದು ಕಂಟ್ರೋಲ್ ಆಗುವುದಿಲ್ಲ. ಹುಬ್ಬಳ್ಳಿಯಲ್ಲಿ ಹೇಗೆ ನಡೆದಿದೆ ನೋಡಿದಿರಲ್ಲ. ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡಿದ್ದಾರೆ.