Breaking News

ಬಗೆದಷ್ಟು ಹೊರ ಬರ್ತಿದೆ PSI ಪರೀಕ್ಷಾ ಅಕ್ರಮ: ಮುನ್ನಾಭಾಯಿ MBBS ಸ್ಟೈಲ್​ನಲ್ಲಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು

Spread the love

ಕಲಬುರಗಿ: ರಾಜ್ಯದಲ್ಲಿ 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪಿಎಸ್​ಐ ಪರೀಕ್ಷೆಯ ಅಕ್ರಮಗಳು ಬಗೆದಷ್ಟು ಹೊರ ಬರುತ್ತಿವೆ.

ಮತ್ತೊಂದು ರೀತಿಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿರುವ ಗ್ಯಾಂಗ್ ಪತ್ತೆ ಸಿಐಡಿ ತನಿಖೆಯಿಂದ ಬಯಲಾಗಿದೆ.

ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾದ ಸ್ಟೈಲ್​ನಲ್ಲಿ ಎಲೆಕ್ಟ್ರಾನಿಕ್ ಡಿವೈಸ್​ ಬಳಸಿ ಅನೇಕ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವ ಸಂಗತಿ ಬಯಲಾಗಿದೆ.

ನಿನ್ನೆ (ಏ.21) ಬಂಧನವಾಗಿರುವ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಕೂಡ ಮುನ್ನಾಬಾಯಿ ಎಂಬಿಬಿಎಸ್ ಸ್ಟೈಲಲ್ಲಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರದ ಹೊರಗಿನವವರಿಂದ ಉತ್ತರ ಪಡೆದು ಪರೀಕ್ಷೆ ಎದುರಿಸಿದ್ದಾರೆ. ಇದೇ ರೀತಿ ಅನೇಕರು ಪರೀಕ್ಷೆ ಬರೆದಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಈ ಅಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಮತ್ತೋರ್ವ ಪ್ರಭಾವಿ ಮುಖಂಡ ಕಿಂಗ್ ಪಿನ್ ಆಗಿರುವ ಶಂಕೆಯಿದೆ. ಬಂಧಿತ ಹಯ್ಯಾಳಿ ದೇಸಾಯಿ ನೀಡಿರೋ ಮಾಹಿತಿ ಮೇರೆಗೆ ಆತನ ಪತ್ತೆಗಾಗಿ ಸಿಐಡಿ ಬಲೆ ಬೀಸಿದೆ. ಈಗಾಗಲೇ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೂರಾರು ಜನರಿಗೆ ಕಿಂಗ್​ಪಿನ್​ ನೌಕರಿ ಕೊಡಿಸಿರುವ ಸಂಗತಿಯನ್ನು ಹಯ್ಯಾಳಿ ದೇಸಾಯಿ ಬಿಚ್ಚಿಟ್ಟಿದ್ದಾನೆ.

ಆರೋಪಿತ ಕಿಂಗ್​ಪಿನ್​ ಕಲಬುರಗಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಭಾರೀ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆತನ ಬಂಧನಕ್ಕಾಗಿ ಸಿಐಡಿ ತಂಡ ಸಾಕಷ್ಟು ಮಾಹಿತಿ ಕಲೆಹಾಕುತ್ತಿದೆ.


Spread the love

About Laxminews 24x7

Check Also

20ನೇ ವಯಸ್ಸಿಗೆ ಭಾರತಕ್ಕೆ ಬಂದು ಗಂಗಾವತಿಯಲ್ಲೇ ನೆಲೆಸಿದ್ದ ಬೆಲ್ಜಿಯಂ ಮಹಿಳೆ ಸಾವು

Spread the loveಗಂಗಾವತಿ: ಪ್ರವಾಸಕ್ಕೆಂದು ಬಂದು ಇಲ್ಲಿನ ಪ್ರಕೃತಿಗೆ ಮಾರುಹೋಗಿ ಕಳೆದ ಹಲವು ದಶಕದಿಂದ ಇಲ್ಲೇ ಒಂಟಿಯಾಗಿ ಬದುಕು ನಡೆಸುತ್ತಿದ್ದ ಬೆಲ್ಜಿಯಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ