Breaking News

ಕರ್ನಾಟಕದಲ್ಲಿ ನಮ್ಮ ಸರ್ಕಾರ ಬರಬೇಕು, 40% ಸರ್ಕಾರ ಹೋಗಬೇಕು – ಎಎಪಿ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಕರೆ

Spread the love

ಬೆಂಗಳೂರು: ದೆಹಲಿ, ಪಂಜಾಬ್ ನಲ್ಲಿ ನಮ್ಮ ಸರ್ಕಾರ ಇದೆ. ಈಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ಬರಬೇಕು. ಇಲ್ಲಿ 40% ಸರ್ಕಾರ ಇದೆ. ದೆಹಲಿಯಲ್ಲಿ ೦% ಸರ್ಕಾರ ಇದೆ. ಈ ಸರ್ಕಾರ ಹೋಗಿ, ನಮ್ಮ ಎಎಪಿ ಸರ್ಕಾರ ಬರಬೇಕು ಎಂಬುದಾಗಿ ಎಎಪಿ ಅಧ್ಯಕ್ಷ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ.

 

ಇಂದು ರೈತ ಸಮಾವೇಶದಲ್ಲಿ ಭಾವಹಿಸಿ ಮಾತನಾಡಿದಂತ ಅವರು, ಕೇಂದ್ರ ಸರ್ಕಾರ ಮೂರು‌ ಕೃಷಿ ಕಾಯ್ದೆ ತಂದಿತ್ತು. ಅಹಂಕಾರದಿಂದ ಕಾಯ್ದೆ ಜಾರಿ‌ ಮಾಡಿತ್ತು. ಲಂಕಾಧಿಪತಿ ಅಹಂಕಾರ ಇಳಿದಂತೆ ರೈತರ ಮೂಲಕ ‌ಮೋದಿ ಅಹಂಕಾರವೂ ಇಳಿದೋಯ್ತು. ರೈತರ ಹೋರಾಟದಿಂದ ಕಾಯ್ದೆ ವಾಪಸ್ಸು ಆಯ್ತು. ನಾನು ಕೂಡ ಹೋರಾಟ ಮೂಲಕ ಬಂದಿದ್ದೇನೆ ಎಂದರು.

 

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಸವಾಲು ಹಾಕಿದ್ರು. ನನ್ನನ್ನ ಚುನಾವಣೆಗೆ ನಿಲ್ಲಿ ಅಂದ್ರು. ಆಗ ನನಗೆ ಆ ಶಕ್ತಿ ಇಲ್ಲ ಅಂದೆ. ಆದರೂ ಸಾಮಾನ್ಯ ಜನರಾಗಿ ನಾವು ಚುನಾವಣೆ ಎದುರಿಸಿದ್ದೇವೆ. ದೆಹಲಿ, ಪಂಜಾಬ್ ನಲ್ಲಿ ನಮ್ಮ ಸರ್ಕಾರ ಇದೆ. ಈಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ಬರಬೇಕು. ಇಲ್ಲಿ 40% ಸರ್ಕಾರ ಇದೆ. ದೆಹಲಿಯಲ್ಲಿ ೦% ಸರ್ಕಾರ ಇದೆ. ಇದನ್ನು ನಾನು ಹೇಳಿದ್ದಲ್ಲ, ಮೋದಿನೆ ಹೇಳಿದ್ದಾರೆ ಎಂದರು.

ಸಿಬಿಐ ದಾಳಿ ಆಯ್ತು, ನನ್ನ ಮನೆಯಲ್ಲಿ ಏನು ಸಿಗಲಿಲ್ಲ. ಆಗ ಮೋದಿನೆ ಹೇಳಿದ್ರು ನಾನು ಸಾಮಾನ್ಯ ಮನುಷ್ಯ ಅಂತ ಗೊತ್ತಾಯ್ತು. ಆಮೇಲೆ ಸರ್ಕಾರದ ಮಂತ್ರಿ ಮೇಲೆ ದಾಳಿ ಆಯ್ತು. ಆದ್ರೆ ಸಿಬಿಐಗೆ ಏನು ಸಿಗಲಿಲ್ಲ. ನಾನು ಸಾಮಾನ್ಯ ‌ಮನುಷ್ಯ, ಹೆಂಡತಿ ಮಕ್ಕಳು ಇದ್ದಾರೆ. ನನಗೆ ಸಾಮಾನ್ಯ ಜನರ ಸಮಸ್ಯೆ ಚನ್ನಾಗಿ ಗೊತ್ತಿದೆ. ಸಾಮಾನ್ಯ ಜನರಿಗೆ ಶಾಲೆ, ಆರೋಗ್ಯ ‌ಮುಖ್ಯ. ಅದನ್ನು ದೆಹಲಿಯಲ್ಲಿ ‌ಮಾಡಿದ್ದೇವೆ ಎಂದರು.

 

ರಾಜ್ಯದಲ್ಲಿ ಶಾಲೆ, ಆಸ್ಪತ್ರೆ ಹದಗೆಟ್ಟಿವೆ. ಅದನ್ನು ಸರಿ‌ ಮಾಡಬೇಕು. ದೆಹಲಿ ಶಾಲೆಯಲ್ಲಿ 99% ಫಲಿತಾಂಶ ಬಂದಿದೆ. ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಬರುತ್ತಿದ್ದಾರೆ. ನೀವು ಕೂಡ ದೆಹಲಿ ಶಾಲೆ ನೋಡಿ. ಆರೋಗ್ಯ ಕ್ಷೇತ್ರ ಬಹಳ ಸುಧಾರಿಸಿದ್ದೇವೆ. ಯಾವುದೇ ಆಪರೇಷನ್ ಅದ್ರೂ ಉಚಿತ ಸೇವೆ ಸಿಗುತ್ತೆ. ವಿದ್ಯುತ್ ಕೂಡ ಉಚಿತ ಮಾಡಿದ್ದೇವೆ. ಯಾಕಂದ್ರೆ ನಾವು ಭ್ರಷ್ಟಾಚಾರ ಮಾಡಲ್ಲ. ನಾವು ನಿಷ್ಠಾವಂತ ಸರ್ಕಾರ ನಡೆಸುತ್ತಿದೇವೆ. ಇದರಿಂದ ಸಾಕಷ್ಟು ಹಣ ಉಳಿಸಿದ್ದೇವೆ. ನಮಗೆ ರಾಜಕೀಯ ಮಾಡಲು ಬರಲ್ಲ ಕೆಲಸ ‌ಮಾತ್ರ ಮಾಡುತ್ತೇವೆ ಎಂಬುದಾಗಿ ತಮ್ಮ ಸರ್ಕಾರದ ಸಾಧನೆಯನ್ನು ಅರವಿಂದ್ ಕೇಜ್ರಿವಾಲ್ ತೆರೆದಿಟ್ಟರು.

ಎರಡು ದಿನಗಳ ಹಿಂದೆ ಹಲ್ಲು‌ ನೋವು ಇತ್ತು. ಅದಕ್ಕೆ ಆಪರೇಷನ್ ಆಗಿದೆ. ಹಾಗಾಗಿ ಮಾತನಾಡಲು ಆಗಲ್ಲ ಅಂತ ಹೇಳಿದ್ದೆ. ಆದ್ರೆ ಸಾವಿರಾರು ಸಂಖ್ಯೆಯಲ್ಲಿ ರೈತರು ಬರುತ್ತಿದ್ದಾರೆ. ಹಾಗಾಗಿ ಬರಬೇಕು ಅಂದ್ರು. ರೈತರು ಬಂದ್ರೆ ನಾನು ಬರಲ್ಲ ಅಂತ ಹೇಳಲು ಆಗಲಿಲ್ಲ. ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಂಡು ಬಂದಿದ್ದೇನೆ ಎಂದರು.


Spread the love

About Laxminews 24x7

Check Also

ಅನಾರೋಗ್ಯದಿಂದ ತಾಯಮ್ಮ ಹುಲಿ ಸಾವು

Spread the loveಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಹುಲಿ ತಾಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ 3.45ರ ಸಮಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ