Breaking News

‘ಈಶ್ವರಪ್ಪ ಒಬ್ಬ ಸುಳ್ಳಿನ ಫ್ಯಾಕ್ಟರಿ ಚೇರ್ಮನ್’ ಇದ್ದಂತೆ,: ಡಿ.ಕೆ ಶಿವಕುಮಾರ್

Spread the love

ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಹಾಗೂ ನಾಯಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಿರತರಾಗಿರುವ ಕಾಂಗ್ರೆಸ್ ನಾಯಕರು, ಇಂದು ಬೆಳಗ್ಗೆ ದೈನಂದಿನ ಚಟುವಟಿಕೆ ಆರಂಭಿಸಿದರು. ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಡಿಕೆಶಿ, ವಿಧಾನಸೌಧದ ಗೋಡೆಗೆ ಹೊಡೆದರೆ ಕಾಸು ಕಾಸು ಕಾಸು ಎನ್ನುತ್ತದೆ ಎಂದು ವ್ಯಂಗ್ಯವಾಡಿದರು.

ಸಂತೋಷ ಪಾಟೀಲ್ ಸಹೋದರ ಏನ್ ಬೇಡಿಕೆ ಇಟ್ಟಿದ್ದಾರೆ ಮೊದಲು ಆ ಕೆಲಸ ಆಗಬೇಕು. ರಾಜೀನಾಮೆ ಅದೆಲ್ಲ ಗೊತ್ತಿಲ್ಲ. ಈಶ್ವರಪ್ಪ ಅವರ ಬಂಧನವಾಗಬೇಕು. ಸಂತೋಷ ಅವರ ಪತ್ನಿಗೆ ಕೆಲಸ ಕೊಡಬೇಕು. ಭ್ರಷ್ಟಾಚಾರದ ಆರೋಪದಡಿ ಎಫ್ಐಆರ್ ಹಾಕಿ ಈಶ್ವರಪ್ಪನವರನ್ನ ಬಂಧಿಸಬೇಕು. 24 ಗಂಟೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದು, ಅಂತೆಯೇ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಹೈಕೋರ್ಟ್ ಗೇಟ್ ಮುಂಭಾಗದಲ್ಲಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ‌. ಈಶ್ವರಪ್ಪ ರಾಜೀನಾಮೆ ನಮ್ಮ ಆದ್ಯತೆ ಆಗಿರಲಿಲ್ಲ. ಈಗಲೂ ಅವರು ರಾಜೀನಾಮೆ ಕೊಡ್ತಾರಾ ಅನ್ನೋದು ನನಗೆ ಡೌಟ್ ಇದೆ. ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿ ಕೇಸ್​​ ದಾಖಲಾಗಬೇಕು. ‘ಈಶ್ವರಪ್ಪ ಒಬ್ಬ ಸುಳ್ಳಿನ ಫ್ಯಾಕ್ಟರಿ ಚೇರ್ಮನ್’ ಇದ್ದಂತೆ ಎಂದರು.

ಎಲ್ಲಾ ಪಂಚಾಯತ್‌, ಸರ್ಕಾರಿ ಕಚೇರಿಯಲ್ಲಿ ಲಂಚ ಲಂಚ. ಕೆಂಪಣ್ಣ ಯಾರು ಅಂತಾ ನನಗೆ ಗೊತ್ತಿಲ್ಲ. ಈ ಸಿಸ್ಟಮ್ ಕ್ಲೀನ್ ಮಾಡೋಕೆ ಹೋರಾಟ ಮಾಡುತ್ತಿದ್ದಾರೆ. ಬಿಬಿಎಂಪಿ ಕಸ ತೆಗೆಯುವ ಕಂಟ್ರಾಕ್ಟರ್ ಒಬ್ಬರು ಹೇಳಿದ್ದಾರೆ. ಶೇ.40ರಷ್ಟು ಕಮಿಷನ್​​ ಅಲ್ಲ, ಶೇ.50ರಷ್ಟು ಎಂದು ಮಾಧ್ಯಮವೊಂದಕ್ಕೆ ಸಂತೋಷ ಪತ್ನಿ ಮಾತನಾಡಿರುವುದನ್ನು ಡಿಕೆಶಿ ಮೊಬೈಲ್​​ನಲ್ಲಿ ಪ್ಲೇ ಮಾಡಿ ತೋರಿಸಿದರು.


Spread the love

About Laxminews 24x7

Check Also

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…

Spread the love ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್… ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ