ಉಡುಪಿ: ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ವಿರುದ್ಧ ದಾಖಲಾಗಿರುವ ಹಲ್ಲೆ ಮತ್ತು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಗೆ ಸಂಬಂಧಿಸಿದಂತೆ ಆಧಾರವಿದ್ದು, ಪ್ರಕರಣ ಕೈ ಬಿಡಲು ಸಾಧ್ಯವಿಲ್ಲ ಎಂದು ನಗರ ವಿಶೇಷ ನ್ಯಾಯಾಲಯ ಹೇಳಿದೆ.
ರಾಜೀವ್ ಮತ್ತು ಇತರ ಆರು ಮಂದಿ, ಜನವರಿ 13, 2016 ರಂದು ಮಾಜಿ ಶಾಸಕ ಎಸ್‌ಬಿ ಘಾಟ್ಗೆ ಅವರ ಮನೆಗೆ ಅವರು ಇಲ್ಲದಿದ್ದಾಗ ಅಕ್ರಮವಾಗಿ ನುಗ್ಗಿ ಕೆಲಸಗಾರನ ಮೇಲೆ ಹಲ್ಲೆ ನಡೆಸಿದ್ದರು. ಗ್ಯಾಂಗ್ ಘಾಟ್ಗೆ ಅವರನ್ನು ಉಲ್ಲೇಖಿಸಿ ನಿಂದನೆ ಮಾಡಿದ್ದರು. ಅವರ ಜಾತಿಯ ಬಗ್ಗೆ ಅವಮಾನಕರ ಪದಗಳನ್ನು ಬಳಸಿದ್ದರು ಎಂದು ರಾಜೀವ್ ತನ್ನ ಗನ್‌ಮ್ಯಾನ್‌ನಿಂದ ಬಂದೂಕನ್ನು ತೆಗೆದುಕೊಂಡು ಕಾರ್ಮಿಕನ ಎದೆಯ ಕಡೆಗೆ ತೋರಿಸಿ, ತಾನು ಘಾಟ್ಗೆಯನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.