ಶಿವಮೊಗ್ಗ: ನನಗೆ ತಪ್ಪು ಮಾಡಿಲ್ಲ ಎನ್ನುವಂತ ನಂಬಿಕೆ ಇದೆ. ನನ್ನ ಮನೆದೇವರು ಚೌಡೇಶ್ವರಿಯವರು ನನ್ನ ಕಾಯುತ್ತಾಳೆ ಎಂಬುದಾಗಿ ನನಗೆ ನಂಬಿಕೆ ಇದೆ. ನಾನು ನಾಳೆ ಸಂಜೆ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೆ.
ಎಸ್ ಈಶ್ವರಪ್ಪ ಘೋಷಣೆ ಮಾಡಿದ್ದಾರೆ.
ಈ ಕುರಿತು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಆ ಬಗ್ಗೆ ತನಿಖೆಯಿಂದ ಎಲ್ಲಾ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದರು.
ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದೇನೆ. ತನಿಖೆಯಿಂದ ನಾನು ನಿರ್ದೋಷಿ ಎಂಬುದಾಗಿ ಹೊರಬರಲಿದೆ. ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ನಾನು ನಾಳೆ ಸಂಜೆ ಸಿಎಂ ಭೇಟಿಯಾಗಿ ರಾಜೀನಾಮೆ ಸಲ್ಲಿಸೋದಾಗಿ ಘೋಷಿಸಿದರು.