ಬೆಂಗಳೂರು : ಗುತ್ತಿಗೆದಾರ ಸಂತೋಷ್ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ವಿಚಾರ ಬಯಲಾಗಿದ್ದು, ಸಚಿವ ಈಶ್ವರಪ್ಪರನ್ನ ಸಂತೋಷ್ ಪಾಟೀಲ್ ಭೇಟಿಯಾಗಿದ್ದು ನಿಜ ಎಂದು ಬೈಲಹೊಂಗಲ ಆರಾದಿಮಠದ ಮಹಾಂತೇಶ ಶಾಸ್ತ್ರಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವ್ರು, ‘ಸಚಿವ ಈಶ್ವರಪ್ಪರನ್ನ ಸಂತೋಷ್ ಪಾಟೀಲ್ ಭೇಟಿಯಾಗಿದ್ದು ನಿಜ. ಆದ್ರೆ, ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತಿಲ್ಲ. 2021ರ ಫೆ.21ರಂದು ಸಚಿವ ಈಶ್ವರಪ್ಪರನ್ನು ಭೇಟಿಯಾಗಿದ್ದೆ. ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸಲು ಕೆಲ ಪುರೋಹಿತರ ಜತೆ ಹೋಗಿದ್ದೆ.
ಈ ವೇಳೆ ಸಚಿವ ಈಶ್ವರಪ್ಪ ಕಚೇರಿಯಲ್ಲಿ ಇದ್ದ ಸಂತೋಷ್ ಇದ್ದರು. ನನ್ನ ನೋಡಿ ಬೈಲಹೊಂಗಲದ ಸ್ವಾಮೀಜಿ ಅಲ್ಲವಾ ಎಂದಿದ್ದರು. ಹೌದು ಅಂತ ಹೇಳಿದಾಗ ಫೋಟೋ ತೆಗಿಸಿಕೊಳ್ಳೋಣ ಅಂದ್ರು. ಬಳಿಕ ನಾನು, ಸಂತೋಷ್, ಪುರೋಹಿತರು ಸೇರಿ ಸಚಿವ ಈಶ್ವರಪ್ಪ ಜತೆ ಫೋಟೋ ತೆಗೆಸಿಕೊಂಡೆವು. ಆದ್ರೆ, ಆ ಫೋಟೋವನ್ನ ಅರ್ಧ ಭಾಗ ಕಟ್ ಮಾಡಲಾಗಿದೆ.
ಕಟ್ ಮಾಡಿ ನಾನೇ ಕರೆದುಕೊಂಡು ಹೋಗಿದ್ದೆ ಅನ್ನೋದು ಸುಳ್ಳು. ಎಲ್ಲರೂ ಸೇರಿ ಈಶ್ವರಪ್ಪ ಜತೆ ಫೋಟೋ ತೆಗೆಸಿಕೊಡಿದ್ದು ನಿಜ. ಆದ್ರೆ, ಈಶ್ವರಪ್ಪ ಬಳಿ ಸಂತೋಷ್‌ರನ್ನ ನಾನು ಕರೆದೊಯ್ದಿರಲಿಲ್ಲ’ ಎಂದರು.