ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಂಸದರೊಬ್ಬರ ಮಗನ ಹೆಸರು ಕೇಳಿಬಂದಿದೆ.
ಹೌದು. ನಟಿ ಸಂಜನಾ ಆಪ್ತ ರಾಹುಲ್‌ನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತನ ಮೊಬೈಲ್‌ನಲ್ಲಿರುವ ವಿಡಿಯೋದಲ್ಲಿರುವ ಪಾರ್ಟಿಯಲ್ಲಿ ಮಾಜಿ ಸಂಸದನ ಪುತ್ರ ಭಾಗಿಯಾಗಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ವಿಡಿಯೋವನ್ನು ಇಟ್ಟುಕೊಂಡು ಮತ್ತಷ್ಟು ಪ್ರಶ್ನೆಗಳನ್ನು ರಾಹುಲ್‌ಗೆ ಕೇಳಿದಾಗ ವಾರಕ್ಕೊಮ್ಮೆ ನಾನು ಆತನ ಜೊತೆ ಮಾತನಾಡುತ್ತಿದ್ದೆಎಂದಿದ್ದಾನೆ. ಈಗ ಸಿಸಿಬಿ ಪೊಲೀಸರು ರಾಜಕಾರಣಿಯ ಪುತ್ರನ ಪಾತ್ರದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸತೊಡಗಿದ್ದಾರೆ.
Laxmi News 24×7