ತುಮಕೂರು: ಪ್ರಿಯಕರನ ಜತೆ ಸೇರಿ ತಾಳಿ ಕಟ್ಟಿದ ಗಂಡನ ಕೊಲೆಗೆ ಸಂಚು ರೂಪಿಸಿದ ಖತರ್ನಾಕ್ ಮಹಿಳೆ ಹಾಗೂ ಪ್ರೇಯಸಿ ಹೇಳಿದಂತೆ ಕೊಲೆಗೈದ ಪ್ರಿಯಕರನನ್ನು ತುಮಕೂರು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕರೇಜವನಹಳ್ಳಿ ಗ್ರಾಮದಲ್ಲಿ ಕೊಲೆ ನಡೆದಿತ್ತು.
ರಾಜು (34) ಕೊಲೆಯಾದ ವ್ಯಕ್ತಿ. ರಾಕೇಶ್ (19) ಹಾಗೂ ಮೀನಾಕ್ಷಿ ( 25) ಬಂಧಿತ ಆರೋಪಿಗಳು. ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ.
ಕಳೆದ 8 ವರ್ಷಗಳ ಹಿಂದೆ ಮೀನಾಕ್ಷಿ ಎಂಬಾಕೆಯನ್ನು ರಾಜು ಮದುವೆಯಾಗಿದ್ದ. ದಂಪತಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಇದೆ. ರಾಜು ಬೆಂಗಳೂರಿನಲ್ಲಿ ಒಂದು ವರ್ಷದಿಂದ ಕೆಲಸ ಮಾಡಿಕೊಂಡಿದ್ದ. ಕಳೆದ ಎರಡು ತಿಂಗಳಿಂದ ಬೆಂಗಳೂರು ಬಿಟ್ಟು ಮತ್ತೆ ಊರು ಸೇರಿದ್ದ. ಅದೇ ಊರಿನವನಾದ ರಾಕೇಶ್, ತುಮಕೂರಿನ ಖಾಸಗಿ ಕಾಲೇಜೊಂದರಲ್ಲಿ ಐಟಿಐ ಓದಿದ್ದ. ಕಳೆದ ಒಂದು ವರ್ಷದ ಹಿಂದೆ ಮದುವೆ ಕಾರ್ಯಕ್ರಮವೊಂದರಲ್ಲಿ ಮೀನಾಕ್ಷಿಗೆ ಪರಿಚಯವಾಗಿದ್ದ. ಈ ವೇಳೆ ಒಬ್ಬರಿಗೊಬ್ಬರು ಮೊಬೈಲ್ ನಂಬರ್ ಶೇರ್ ಮಾಡಿಕೊಂಡಿದ್ದರು.
ಕೊಲೆಯಾದ ರಾಜುಮೀನಾಕ್ಷಿ ಮನೆಯಲ್ಲಿ ಬಟ್ಟೆ ಹೊಲಿಯುತ್ತಿದ್ದಳು. ಬಟ್ಟೆ ಹೊಲಿಸುವ ನೆಪದಲ್ಲಿ ರಾಕೇಶ್ ಆಗಾಗ ಮೀನಾಕ್ಷಿ ಮನೆಗೆ ಎಂಟ್ರಿ ಕೊಡುತ್ತಿದ್ದ. ಈ ನಡುವೆ ಇವರಿಬ್ಬರ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಇದೇ ರೀತಿ ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಲವ್ವಿ ಡವ್ವಿ ಮುಂದುವರಿದಿತ್ತು. ಯಾವಾಗ ಗಂಡ ರಾಜು ಬೆಂಗಳೂರು ಬಿಟ್ಟು ಮನೆ ಸೇರಿದ್ನೋ, ಇವರಿಬ್ಬರ ಅನೈತಿಕ ಸಂಬಂಧಕ್ಕೆ ತಡೆಗೋಡೆ ಬಿದ್ದಂತಾಗಿತ್ತು. ಅಲ್ಲದೇ ರಾಜು ಆಗಾಗ ಕುಡಿದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನಂತೆ.