Breaking News

ನನ್ನ ಪತಿಯದ್ದು ಆತ್ಮಹತ್ಯೆಯಲ್ಲ, ಕೊಲೆ : ಗುತ್ತೆದಾರ ಸಂತೋಷ್‌ ಪಾಟೀಲ್‌ ಪತ್ನಿ

Spread the love

ಬೆಳಗಾವಿ : ನನ್ನ ಪತಿ ಸಂತೋಷ್‌ ಪಾಟೀಲ್‌ರದ್ದು ಆತ್ಮಹತ್ಯೆಯಲ್ಲ, ಕೊಲೆ ಮಾಡಲಾಗಿದೆ. ಅವ್ರು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ನಿನ್ನೆ ನನ್ನ ಜೊತೆ ಚೆನ್ನಾಗಿಯೇ ಮಾತಾಡಿದ್ದರು ಎಂದು ಸಾವಿಗೀಡಾದ ಗುತ್ತೆದಾರ ಸಂತೋಷ್‌ ಪಾಟೇಲ್‌ ಪತ್ನಿ ಹೇಳಿದ್ದಾರೆ.

 

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಬಸವೇಶ್ವರನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂತೋಷ್‌ ಪತ್ನಿ ಜಯಶ್ರೀ, ‘ನನ್ನ ಪತಿಯನ್ನ ಕೊಲೆ ಮಾಡಲಾಗಿದೆ. ಅವ್ರು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ನಿನ್ನೆ ನನ್ನ ಜೊತೆ ಚೆನ್ನಾಗಿಯೇ ಮಾತಾಡಿದ್ದರು. ಇವತ್ತು ಪತಿ ಇಲ್ಲ ಅಂದ್ರೆ ಹೇಗೆ? ಇದಕ್ಕೆಲ್ಲ ಸಚಿವ ಈಶ್ವರಪ್ಪನೇ ಕಾರಣ’ ಎಂದು ದುಃಖಿತರಾದರು.

ಇನ್ನು ‘ನನ್ನ ಪತಿ ಸಾಲಸೋಲ ಮಾಡಿ ರಸ್ತೆ ಕಾಮಗಾರಿ ಮಾಡಿದ್ದರು. ಇವಾಗ ನನಗೆ ಸಂತೋಷ್‌ ಪರಿಚಯವೇ ಇಲ್ಲವೆಂದು ಈಶ್ವರಪ್ಪ ಹೇಳ್ತಾರೆ. ಹಾಗಾದ್ರೆ, ಸಾರ್ವಜನಿಕ ರಸ್ತೆ ಕೆಲಸ ಮಾಡಿಸಲು ನಮಗೆ ದುಡ್ಡು ಹೆಚ್ಚಾಗಿದೆಯಾ? ಈಶ್ವರಪ್ಪ ಪರಿಚಯ ಇಲ್ಲ ಅಂದ್ರೆ ಫೋಟೋ ಎಲ್ಲಿಂದ ಬಂದವು? ನನ್ನ ಗಂಡ ಬಿಜೆಪಿ ಎಂದು ಜೀವವನ್ನೇ ಕಳೆದುಕೊಂಡ. ನಾನು 2 ವರ್ಷದ ಮಗು ಕಟ್ಟಿಕೊಂಡು ಮುಂದೆ ಹೇಗೆ ಜೀವನ ನಡೆಸಲಿ’ ಎಂದು ಸಚಿವ ಈಶ್ವರಪ್ಪ ವಿರುದ್ಧ ಸಂತೋಷ್‌ ಪಾಟೀಲ್‌ ಪತ್ನಿ ಜಯಶ್ರೀ ಆಕ್ರೋಶ ವ್ಯಕ್ತ ಪಡಿಸಿದರು.


Spread the love

About Laxminews 24x7

Check Also

ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ

Spread the love ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ* * *ಅಂಗನವಾಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ