ಮುಂಬೈ: ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ಮೇ 3ರೊಳಗೆ ಸರ್ಕಾರ ಕ್ರಮಕೈಗೊಂಡು ತೆಗೆದುಹಾಕಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಮಂಗಳವಾರ ಥಾಣೆಯಲ್ಲಿ ಸಾರ್ವಜನಿಕ ರ್‍ಯಾಲಿ ನಡೆಸಿ ಮಾತನಾಡಿದ ಅವರು, ಶಿವಸೇನೆ ನೇತೃತ್ವದ ರಾಜ್ಯ ಸರ್ಕಾರವು ಮೇ 3ಕ್ಕೂ ಮುನ್ನ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ, ಎಂಎನ್‍ಎಸ್ ಕಾರ್ಯಕರ್ತರು ಮಸೀದಿಗಳ ಮುಂದೆ ಹನುಮಾನ್ ಚಾಲೀಸಾವನ್ನು ಹಾಕುತ್ತಾರೆ ಎಂದಿದ್ದಾರೆ.
ಭಾಷಣದ ಬಳಿಕ ಅನೇಕ ಎಂಎನ್‍ಎಸ್ ಬೆಂಬಲಿಗರು ಮಸೀದಿಗಳ ಮುಂದೆ ಇದ್ದ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾವನ್ನು ಹಾಕಲು ಪ್ರಾರಂಭಿಸಿದರು. ನಂತರ ಅವರ ವಿರುದ್ಧ ಪೆÇಲೀಸ್ ಕ್ರಮ ಕೈಗೊಂಡ ಬಳಿಕ ರಾಜ್ ಠಾಕ್ರೆ ಅವರು ಮೇ 3 ರೊಳಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡು ಎಲ್ಲಾ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ, ಮುಂದೆ ನಡೆಯುವ ಅವಂತಾರಗಳಿಗೆ ತಾವು ಮತ್ತು ಅವರ ಪಕ್ಷದ ಕಾರ್ಯಕರ್ತರು ಜವಾಬ್ದಾರರಾಗಿರುವುದಿಲ್ಲ ಎಂದು ಹೇಳಿದ್ದಾರೆ.
Laxmi News 24×7