ಉಡುಪಿ: ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಮಾಡಿ ಉಡುಪಿಯ ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಕುಟುಂಬಿಕರು ಮಂಗಳವಾರ ತಡರಾತ್ರಿ ಉಡುಪಿಗೆ ಆಗಮಿಸಿದರು.
ಬೆಂಗಳೂರಿಂದ ಮತ್ತು ಬೆಳಗಾವಿಯಿಂದ ಬಂದಿರುವ ಸಹೋದರರು ಸೇರಿದಂತೆ ಎಂಟು ಮಂದಿ ಕುಟುಂಬಿಕರು ಘಟನೆ ನಡೆದ ಖಾಸಗಿ ಲಾಡ್ಜ್ ಗೆ ಆಗಮಿಸಿ ನೇರವಾಗಿ ಆತ್ಮಹತ್ಯೆ ಮಾಡಿಕೊಂಡ ರೂಮ್ ನಂಬರ್ 207 ತೆರಳಿದರು.
ನಾವು ಬಾರದೆ ಯಾವುದೇ ತನಿಖೆ ಮುಂದುವರೆಸಬೇಡಿ ಎಂದು ಹೇಳಿದ್ದ ಕಾರಣ ಕಳೆದ 12 ಗಂಟೆಗೂ ಅಧಿಕ ಕಾಲದಿಂದ ಸಹೋದರರ ಬರುವಿಕೆಗಾಗಿ ಉಡುಪಿ ಪೊಲೀಸರು ಕಾದಿದ್ದರು.
ಸದ್ಯ ಸಂತೋಷ್ ಪಾಟೀಲ್ ಕುಟುಂಬಿಕರು ಉಡುಪಿಗೆ ಆಗಮಿಸಿದ್ದು ಅಧಿಕೃತವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಬುಧವಾರ ಬೆಳಗ್ಗೆ ಶವದ ಪಂಚನಾಮೆ ಮತ್ತು ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Laxmi News 24×7