Breaking News

ಬಿಜೆಪಿಯೇ ನನ್ನ ಗಂಡನನ್ನು ಸಮಾಧಿ ಮಾಡಿಬಿಡ್ತು; ಸಂತೋಷ್‌ ಪತ್ನಿ ಜಯಶ್ರೀ

Spread the love

ಬೆಳಗಾವಿ: ಬಿಜೆಪಿಯೇ ನನ್ನ ಗಂಡನನ್ನು ಸಮಾಧಿ ಮಾಡಿಬಿಡ್ತು ಎಂದು ಸಂತೋಷ್‌ ಪತ್ನಿ ಜಯಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ರಾತ್ರಿ ನನ್ನ ಪತಿ ಸಂತೋಷ್‌ ನನ್ನ ಜೊತೆ ಮಾತನಾಡಿದ್ದರು. ಬೆಳಗ್ಗೆ ವೇಳೆಗೆ ಅವರ ಆತ್ಮಹತ್ಯೆ ಸುದ್ದಿ ಬಂದಿದೆ.

ಮದುವೆಯಾಗಿ ಇನ್ನೂ ಮೂರು ವರ್ಷ ಆಗಿದೆ. ನಾನೇನು ಮಾಡಲಿ ಈಗ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನನ್ನ ಬಳೆ, ಸರ ಹೀಗೆ ಎಲ್ಲಾ ಒಡವೆಗಳನ್ನು ಅಡ ಇಟ್ಟು ಕಾಮಗಾರಿಗಳನ್ನು ಮಾಡಿಸಿದ್ದರು. ಆದ್ರೆ, ಸರ್ಕಾರದಿಂದ ಬಿಲ್‌ ಬಂದಿರಲಿಲ್ಲ. ಕಾರ್ಯಕರ್ತರದ್ದೇ ಈ ಸ್ಥಿತಿ ಆದರೆ, ಸಾಮಾನ್ಯರದ್ದು ಏನು ಗತಿ ಎಂದು ಸಂತೋಷ್‌ ಪತ್ನಿ ಜಯಶ್ರೀ ಪಶ್ನೆ ಮಾಡಿದ್ದಾರೆ. ಸಚಿವ ಈಶ್ವರಪ್ಪ ಅವರೇ ನನ್ನ ಪತಿಯನ್ನು ಹಾಳು ಮಾಡಿದ್ದು. ಅವರಿಂದಲೇ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಯಶ್ರೀ ಇದೇ ವೇಳೆ ಆರೋಪ ಮಾಡಿದ್ದಾರೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ