ಬೆಳಗಾವಿ: ಮಾರಣಾಂತಿಕ ವೈರಸ್ ಕೊರೋನಾ ಇಂದು ಜಿಲ್ಲೆಯಲ್ಲಿ ಮತ್ತೊಂದು ಜೀವ ತೆಗೆದುಕೊಂಡಿದ್ದು ಒಟ್ಟು ಮೃತರ ಸಂಖ್ಯೆ 7 ಕ್ಕೇರಿದೆ.
ಅಥಣಿ ತಾಲ್ಲೂಕಿನ ಗ್ರಾಮವೊಂದರ 60 ವರ್ಷದ ಸೊಂಕಿತ ಮಹಿಳೆ ಇಂದು ಬಲಿಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮೃತರ ಸಂಖ್ಯೆ ತೀವ್ರತೆ ಪಡೆದುಕೊಳ್ಳುತ್ತಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯಾದ್ಯಾಂತ ಕೊರೋನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಸಮುದಾಯ ಮಟ್ಟಕ್ಕೂ ಹರಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಜನರು ಮಾಸ್ಕ್ ಬಳಸಿ ಅಗತ್ಯವಿದ್ದರೆ ಮಾತ್ರ ಹೊರಗೆ ಬರಬೇಕು.