Breaking News

‘ಮುರುಘಾ ಶರಣರ ಜನ್ಮದಿನ’ ‘ಸಮಾನತಾ ದಿನ’ವಾಗಿ ಆಚರಣೆ – ಸಿಎಂ ಬೊಮ್ಮಾಯಿ ಘೋಷಣೆ

Spread the love

ಬೆಂಗಳೂರು : ಮುರುಘಾ ಶರಣರ ಜನ್ಮದಿನವನ್ನು ಸಮಾನತಾ ದಿನವೆಂದು ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಬದಲಾಗಿ ಹಮ್ಮಿಕೊಂಡಿದ್ದ ಸಮಾನತ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.

ಬಸವಣ್ಣನವರ ವೈಚಾರಿಕತೆ ತತ್ವ ಆದರ್ಶಗಳನ್ನು ಪುನ: ಬಿತ್ತುವಂಥ ಸಾಹಸಕ್ಕೆ ಕೈ ಹಾಕಿರುವ ಸೃಜನಶೀಲ ಚಿಂತಕರೂ ಆಗಿರುವ ಡಾ: ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚಾರಣೆಯನ್ನು ಸಮಾನತಾ ದಿನ ಎಂದು ಆಚರಿಸಲಾಗುತ್ತಿರುವುದು ಸೂಕ್ತ ವಾಗಿದೆ. ಬಸವಾದಿ ಶರಣರ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಭೆ ಸಮಾರಂಭಗಳಲ್ಲಿ ಕೇಳಿಬರುವ ಮಾತು. 12 ನೇ ಶತಮಾನದಲ್ಲಿ ಸಮಾನತೆ ತರುವುದು, ಲಿಂಗಬೇಧ, ಮೂಢ ನಂಬಿಕೆಗಳನ್ನು ತೊಡೆದುಹಾಕುವುದಕ್ಕಾಗಿ ಹೋರಾಟ ನಡೆಯಿತು. ಅವರ ವಿಚಾರ ಇಂದಿಗೂ ಪ್ರಸ್ತುತ ಎಂದರೆ ಆ ಎಲ್ಲಾ ಅನಿಷ್ಟಗಳು ಇಂದಿಗೂ ಪ್ರಚಲಿತವಾಗಿವೆ ಎಂಬ ಚಿಂತನೆ ಮೂಡುತ್ತದೆ. ಸಮಾಜ ಪರಿವರ್ತನೆಗೆ ನಿರಂತರವಾದ ಶುದ್ದೀಕರಣದ ಅಗತ್ಯವಿದೆ. ನಮ್ಮ ಕನ್ನಡ ನಾಡಿನಲ್ಲಿ ಈ ದಿಟ್ಟ ಹೆಜ್ಜೆಯನ್ನು ಇಟ್ಟಿರುವುದು ಮುರುಘಾ ಶರಣರು. ಹಲವಾರು ಟೀಕೆ ಟಿಪ್ಪಣಿಗಳು ಬಂದಾಗಲೂ ಬಸವತತ್ವವನ್ನು ಎಂದಿಗೂ ಕೈಬಿಡುವುದಿಲ್ಲ ಎನ್ನುವ ದಿಟ್ಟ ನಿಲುವಿನಿಂದ ಸಮಾಜದ ಎಲ್ಲಾ ವರ್ಗದ ಜನರಿಗೆ, ಧ್ವನಿ ಇಲ್ಲದವರಿಗೆ ಧ್ವನಿ, ಗುರುತಿಲ್ಲದವರಿಗೆ ಗುರುತು ನೀಡಲು ಹಾಗೂ ಎಲ್ಲಾ ಸಮಾಜದವರಿಗೆ ಗುರು ಪೀಠ ಸ್ಥಾಪನೆ ಮಾಡುವ ಮೂಲಕ ಹೊಸ ಮನ್ವಂತರವನ್ನು ತಂದಿದ್ದಾರೆ ಎಂದರು.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ