ವಿಜಯಪುರ: ರಾಜ್ಯದಲ್ಲೀಗ ಕಾರು ನಿಲ್ಲಿಸಿ ಹೋಗುವುದಕ್ಕೂ ಭಯ ಎನಿಸುವಂಥ ವಾತಾವರಣ ಉಂಟಾದಂತಿದೆ. ಅದರಲ್ಲೂ ಒಂದೇ ದಿನ ಒಂದೇ ಥರದ ಎರಡು ಪ್ರಕರಣಗಳು ನಡೆದಿರುವುದು ಕಾರುಗಳ ಮಾಲೀಕರಲ್ಲಿ ಆತಂಕ ಉಂಟುಮಾಡಿದ್ದು, ಎಚ್ಚರ ವಹಿಸಬೇಕಾದ ಸೂಚನೆಯನ್ನೂ ಪರೋಕ್ಷವಾಗಿ ನೀಡಿದೆ.
ಬೆಳಗಾವಿಯ ಗೋಕಾಕ್ನ ಸಬ್ ಜೈಲ್ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿನ ಗಾಜು ಒಡೆದ ಕಳ್ಳರು, ಮುತ್ತುನಂದಿ ಎಂಬವರ 10 ಲಕ್ಷ ರೂ. ದೋಚಿಕೊಂಡು ಹೋದ ಬೆನ್ನಿಗೆ ರಾಜ್ಯದಲ್ಲಿ ಅಂಥದ್ದೇ ಮತ್ತೊಂದು ಪ್ರಕರಣ ನಡೆದಿದೆ. ವಿಜಯಪುರ ನಗರದ ಅಥಣಿ ರಸ್ತೆ ಬಳಿ ಈ ಘಟನೆ ನಡೆದಿದೆ.
Laxmi News 24×7