Breaking News

ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಇನ್ಸ್​​ಪೆಕ್ಟರ್ ಹಜರೇಶ್ ಮತ್ತು ತಂಡ ಬಂಧಿಸಿದೆ..

Spread the love

ಬೆಂಗಳೂರು : ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಸಿಫ್ ಹುಸೇನ್, ಅಪ್ಸರ್ ಅಹಮ್ಮದ್, ಅಸ್ಗರ್ ಮಾದಿ ಹಾಗೂ ತೌಸಿಫ್ ಬಂಧಿತ ಆರೋಪಿಗಳು.

ರಗಳ್ಳರು ಏರಿಯಾಗಳಲ್ಲಿ ರೌಂಡ್ಸ್ ಹೊಡೆದು ಮೊದಲು ಏರಿಯಾ ಸರ್ವೆ ಮಾಡುತ್ತಿದ್ದರು. ಯಾವ ರಸ್ತೆಯಲ್ಲಿ ಸರಗಳವು ಮಾಡಿದರೆ ಸುಲಭವಾಗಿ ಎಸ್ಕೇಪ್ ಆಗಬಹುದು ಎಂದು ಪ್ಲ್ಯಾನ್ ಮಾಡುತ್ತಿದ್ದರು. ಪಾರ್ಕ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವ ಮಹಿಳೆಯರು, ವೃದ್ಧೆಯರನ್ನು ಟಾರ್ಗೆಟ್ ಮಾಡಿ, ಪಲ್ಸರ್ ಬೈಕ್ ಹಾಗೂ ಡಿಯೋ ಬೈಕ್​​ಗಳಲ್ಲಿ ಬಂದು ಸರಗಳ್ಳತನ ಮಾಡುತಿದ್ದರು. ಕೃತ್ಯವೆಸಗಿದ ಮಾರ್ಗ‌‌ ಮಧ್ಯೆ ಬೈಕ್‌ನಲ್ಲೇ ಬಿಡುತ್ತಿದ್ದರು.

ಸರಗಳ್ಳರನ್ನು ಬಂಧಿಸಿ 10ಕ್ಮೂ ಹೆಚ್ಚು ಪ್ರಕರಣಗಳನ್ನ ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 25 ಲಕ್ಷ ಬೆಲೆ ಬಾಳುವ 490 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ವಿರುದ್ಧ ವಿವಿಧ ಅಪರಾಧ‌‌ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


Spread the love

About Laxminews 24x7

Check Also

5 ತಾಲೂಕುಗಳ ಶಾಲೆಗೆ ಇಂದು ರಜೆ ಘೋಷಣೆ

Spread the loveಮಂಗಳೂರು/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್​ 29(ಶುಕ್ರವಾರ) ರಂದು ಜಿಲ್ಲೆಯ ಶಾಲೆ, ಪ್ರೌಢಶಾಲೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ