ಬೆಂಗಳೂರು : ಮಹಾನಗರದ ರಸ್ತೆ ಗುಂಡಿ ನಿರಂತರವಾಗಿ ಪ್ರಾಣಬಲಿ ಪಡೆಯುತ್ತಿದ್ದರೂ, ಬಿಬಿಎಂಪಿ ಮಾತ್ರ ತನ್ನ ದಿವ್ಯ ನಿರ್ಲಕ್ಷ್ಯವನ್ನು ಮುಂದುವರಿಸಿದೆ. ದಿನಕ್ಕೊಬ್ಬರು ಬಿದ್ದು ಸಾವು-ನೋವು ಅನುಭವಿಸುತ್ತಿರುವ ಸಂದರ್ಭದಲ್ಲಿ ಇದೀಗ ನಗರಕ್ಕೆ ಅತಿದೊಡ್ಡ ತೆರಿಗೆ ಮೂಲವಾಗಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಇದರ ವಿರುದ್ಧ ದನಿ ಎತ್ತಿರುವುದು ಕೊಂಚ ಬದಲಾವಣೆಯ ನಿರೀಕ್ಷೆ ಮೂಡಿಸಿದೆ.ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ನಿರ್ಲಕ್ಷ್ಯ, ದಿಢೀರ್ ರಸ್ತೆ ಮಧ್ಯೆ ಗುಂಡಿ ತೋಡಿ ಹಾಗೆಯೇ ಬಿಡುವುದು, ರಸ್ತೆ ಅಂಚುಗಳಲ್ಲಿ ತೆರೆದ ಗುಂಡಿಗಳಿಗೆ ಸೂಚನಾ ಫಲಕ ಅಳವಡಿಸದಿರುವುದು, ಯಾವುದೇ ಮುನ್ನೆಚ್ಚರಿಕೆ, ಸೂಚನೆ ನೀಡದೇ ರಸ್ತೆಗಳಲ್ಲಿ ಕಾಮಗಾರಿ ಆರಂಭಿಸುವುದು ಸೇರಿದಂತೆ ಹಲವು ಚಟುವಟಿಕೆಗಳು ಬೆಂಗಳೂರಿನ ಪ್ರತಿ ರಸ್ತೆಯಲ್ಲಿ ನಿತ್ಯವೂ ಗೋಚರಿಸುತ್ತವೆ.
