Breaking News

ಸಬ್ ಮರ್ಸಿಬಲ್ ಪಂಪ್ ಗಳನ್ನು ಕಳವು ಮಾಡುತ್ತಿದ್ದ ಮೂವರು ಬೆಳಗಾವಿ ಗ್ರಾಮೀಣ ಪೋಲೀಸರ ಬಲೆಗೆ

Spread the love

ಬೆಳಗಾವಿ – ಹೊಲಗದ್ದೆಗಳಲ್ಲಿ ಬೋರವೆಲ್ ಗಳಿಗೆ ಅಳವಡಿಸಿರುವ ಸಬ್ ಮರ್ಸಿಬಲ್ ಪಂಪ್ ಗಳನ್ನು ಕಳವು ಮಾಡುತ್ತಿದ್ದ ಮೂವರು ಬೆಳಗಾವಿ ಗ್ರಾಮೀಣ ಪೋಲೀಸರ ಬಲೆಗೆ ಬಿದ್ದಿದ್ದಾರೆ.

ಬೆಳಗಾವಿ ಪಕ್ಕದ ಮಚ್ಛೆ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಅಳವಡಿಸಿರುವ ಪಂಪ್ ಸೆಟ್ ಗಳನ್ನು ಕಳವು ಮಾಡಿ ಮಾರಾಟ ಮಾಡಿತ್ತಿದ್ದ ಮೂವರನ್ನು ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸ್ರು ಬಂಧಿಸಿದ್ದಾರೆ.

ಮೂವರ ಕಳ್ಳರ ಗ್ಯಾಂಗ್ ರೈತರ ಹೊಲಗದ್ದೆಗಳಿಂದ ಕಳವು ಮಾಡಲಾದ 2ಲಕ್ಷ 70 ಸಾವಿರ ಕಿಮ್ಮತ್ತಿನ 18 ಸಬ್ ಮರ್ಸಿಬಲ್ ಪಂಪ್ ಗಳನ್ನು ಮತ್ತು ಕಳ್ಳತನ ಮಾಡಲು ಉಪಯೋಗಿಸುತ್ತಿದ್ದ ಅಟೋರಿಕ್ಷಾವನ್ನು ಪೋಲೀಸ್ರು ವಶಪಡಿಸಿಕೊಂಡಿದ್ದಾರೆ.

ಪಂಪ್ ಸೆಟ್ ಗಳನ್ನು ದೋಚಿ ಮಾರಾಟ ಮಾಡುತ್ತಿದ್ದ ಖಾದರವಾಡಿಯ ಸೈಯಬ್ ಅಲಿ ಕಾಸೀಂಸಾಬ್ ನಾಯಕವಾಡಿ (26) ಪೀರನವಾಡಿಯ ನಾಗರಾಜ್ ಲಕ್ಷ್ಮಣ ಕರನಾಯಕ,ರುದ್ರೇಶ್ ಯಲ್ಲಪ್ಪ ತಳವಾರ ಪೀರನವಾಡಿ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ