ಕೊಪ್ಪಳ: ಮಸೀದಿ, ಮಂದಿರಗಳಲ್ಲಿ ಧ್ವನಿ ವರ್ಧಕ ಬಳಕೆ ವಿಚಾರ, ಇದು ಇವತ್ತಿನ ವಿಷಯ ಅಲ್ಲ. ಬಹಳ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಇದೆ. ಇಷ್ಟೇ ಪ್ರಮಾಣದ ಧ್ವನಿ ವರ್ದಕ ಬಳಸಲು ಆದೇಶವಿದೆ. ಆದರೆ ಅದು ಸರಿಯಾಗಿ ಫಾಲೋ ಆಪ್ ಆಗುತ್ತಿಲ್ಲ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಕೊಪ್ಪಳದಲ್ಲಿ ಬಿಜೆಪಿ 42 ನೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಎಲ್ಲ ಧಾರ್ಮಿಕ ಸಂಸ್ಥೆಗಳಿಗೆ ನಿಯಮಗಳಿವೆ. ನಾವೀಗ ಆ ನಿಯಮಗಳನ್ನ ಫಾಲೋ ಅಪ್ ಮಾಡುವ ಪ್ರಯತ್ನ ಮಾಡೋ ಕೆಲಸ ಆಗುತ್ತಿದೆ. ಕೋರ್ಟ್ ಆದೇಶ ಇರೋದ್ರಿಂದ ಎಲ್ಲರೂ ಫಾಲೋ ಮಾಡಬೇಕು ಎಂದರು. ಅನೇಕ ವ್ಯಕ್ತಿಗಳ ತ್ಯಾಗ ಬಲಿದಾನದಿಂದ ಇಂದು ಬಿಜೆಪಿ ಈ ಮಟ್ಟಕ್ಕೆ ಬೆಳದಿದೆ. ನರೇಂದ್ರ ಮೋದಿ ದೈವ ಪುರುಷರು, ಅವರನ್ನು ಪ್ರಧಾನಿಯಾಗಿ ಪಡೆದಿದ್ದೆ ನಮ್ಮ ಭಾಗ್ಯವಾಗಿದೆ. ಮೋದಿ ನಮಗೋಸ್ಕರ ಕೆಲಸ ಮಾಡುತ್ತಿದ್ದಾರೆ. ಮೋದಿ ತಮ್ಮ ಮನೆಗೆ ಕೆಲಸ ಮಾಡ್ತೀಲ್ಲ, ದೇಶದ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.