ಅಂಕಪಟ್ಟಿಯಲ್ಲಿ ಹೆಸರು ತಿದ್ದುಪಡಿಗೆ 1200 ರೂ. ಲಂಚ ಕೇಳಿ, 1000 ರೂ ಪಡೆಯುವಾಗ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾನೆ.
ತಂದೆ ಮಹಾದೇವಗೌಡ ಪಾಟೀಲ (ಸಾ: ಮನೆಂ: 186 ಕುಟರನಟ್ಟ ಪೋಸ್ಟ: ಹಿರೇಬೂದನೂರ ತಾ: ಸವದತ್ತಿ) ಎಸಿಬಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹಾಗೂ ತಮ್ಮ ಸ್ನೇಹಿತ ಮಹಾಂತೇಶ ಚಂದ್ರಪ್ಪ ಬೂತನವರ ಇಬ್ಬರ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿ ನಮೂದಿದ್ದ ಹೆಸರುಗಳನ್ನು ತಿದ್ದುಪಡಿ ಮಾಡಿ ಸರಿಪಡಿಸಿ ಪೂರೈಸಲು ವೆಂಕರೆಡ್ಡಿ ಹನುಮರೆಡ್ಡಿ ನೆಗಲಿ (ದ್ವೀತಿಯ ದರ್ಜೆ ಸಹಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸವದತ್ತಿ). ಇವರನ್ನು ಭೇಟಿಯಾದಾಗ ಅವರು ರೂ.1200/-ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದರು.
ಎಸಿಬಿ ಎಸ್ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್ಪಿ ಜೆ.ಎಮ್. ಕರುಣಾಕರ ಶೆಟ್ಟಿ, ದೂರು ದಾಖಲಿಸಿಕೊಂಡು, ಎ.ಎಸ್ ಗುದಿಗೊಪ್ಪ, ಪೊಲೀಸ್ ನಿರೀಕ್ಷಕರು ಹಾಗೂ ಬೆಳಗಾವಿ ಎಸಿಬಿ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಚರಣೆ ನಡೆಸಿದರು.
Laxmi News 24×7