ಬೆಳಗಾವಿ: ಸಂಪುಟದಿಂದ ಮುರುಗೇಶ್ ನಿರಾಣಿ ಅವರನ್ನ ಕೈಬಿಡ್ತಾರೆ ಎಂಬ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ ಸಚಿವ ಮುರುಗೇಶ್ ನಿರಾಣಿ , ಮಂತ್ರಿ ಆಗ್ಲಿ, ಎಂಎಲ್‍ಎ ಆಗ್ಲಿ ನಮ್ಮ ತಾತನ ಆಸ್ತಿಯಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಮುಖ್ಯಮಂತ್ರಿ ಪರಮಾಧಿಕಾರವಾಗಿದ್ದು, ನಮ್ಮ ರಾಜ್ಯದ ನಾಯಕರು, ರಾಷ್ಟ್ರೀಯ ವರಿಷ್ಠರು ಸೇರಿ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತಾರೆ. ಮಂತ್ರಿ ಆಗಲಿ, ಎಂಎಲ್‍ಎ ಆಗಲಿ, ಇದು ನಮ್ಮ ತಾತ ಆಸ್ತಿಯಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. 30ವರ್ಷದಿಂದ ಬಿಜೆಪಿ ಪಕ್ಷದ ಕಾರ್ಯಕರ್ತ ಆಗಿರುವೆ. ನಾಳೆ ಮಂತ್ರಿ ಕೊಟ್ಟರು ಇದರಲ್ಲಿ ಇರ್ತೇವಿ. ಎಂಎಲ್‍ಎ ಟಿಕೆಟ್ ಕೊಡದಿದ್ದರು ನಾವು ಈ ಪಕ್ಷದಲ್ಲಿ ಇರುತ್ತೇವೆ. ನಾನು ಪಕ್ಷದ ಸಕ್ರಿಯ ಸದಸ್ಯನಾಗಿ ಮುಂದೆ ಬರುವಂತವರಿಗೆ ಮಾರ್ಗದರ್ಶನ ಮಾಡುತ್ತೇನೆ ಎಂದು ಹೇಳಿದರು.