ಮುಂಬೈನ ವಾಂಖೆಡೆ ಮೈದಾನದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ರಾಜಸ್ತಾನ್ ರಾಯಲ್ಸ್ (ಆರ್‌ಆರ್) ಮುಖಾಮುಖಿಯಾಗುತ್ತಿವೆ. ಐಪಿಎಲ್ 13ನೇ ಸೀಸನ್‌ನಲ್ಲಿ ಆರ್‌ಆರ್ ಮೊದಲೆರಡು ಪಂದ್ಯಗಳನ್ನ ಜಯಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆರ್‌ಸಿಬಿ ಒಂದು ಪಂದ್ಯ ಸೋಲು ಹಾಗೂ ಗೆಲುವನ್ನ ಕಂಡಿದೆ.
ಆರ್‌ಸಿಬಿ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನ್ನ ಕಂಡ ಬಳಿಕ, ಕೆಕೆಆರ್ ವಿರುದ್ಧ ಗೆದ್ದು ಕಂಬ್ಯಾಕ್ ಮಾಡಿದೆ. ಹೀಗಾಗಿ 2 ಪಾಯಿಂಟ್ಸ್‌ಗಳು ಆರ್‌ಸಿಬಿ ಖಾತೆಗೆ ಸೇರಿದೆ.
ಆರ್‌ಸಿಬಿ ವರ್ಸಸ್ ಆರ್‌ಆರ್ ಪಂದ್ಯ ಇಂದು ಸಂಜೆ 7.30ಕ್ಕೆ ಆರಂಭವಾಗಲಿದ್ದು, ಪಂದ್ಯಕ್ಕೂ ಮುಂಚೆ ಪಿಚ್ ರಿಪೋರ್ಟ್ ಹಾಗೂ ಫ್ಯಾಂಟಸಿ ಡ್ರೀಮ್ ಟೀಂ ಕುರಿತು ಈ ಕೆಳಗೆ ಮಾಹಿತಿ ಪಡೆಯಿರಿ.