ಬೆಂಗಳೂರು: ಚಿಕನ್ ಖರೀದಿ ಮಾಡಲು ಹೋದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ.
ಚಂದ್ರು ಕೊಲೆಯಾದ ಯುವಕ. ಜೆಜೆ ನಗರದ ಹಳೇ ಗುಡ್ಡದಹಳ್ಳಿಯಲ್ಲಿ ಘಟನೆ ನಡೆದಿದ್ದು, ಯುವಕ ಚಂದ್ರುನನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.
ನಡೆದಿದ್ದೇನು?
ಅಂಜಪ್ಪ ಗಾರ್ಡನ್‍ನಲ್ಲಿ ಚಂದ್ರ ಬರ್ತ್‍ಡೇ ಪಾರ್ಟಿಗೆಂದು ಹೋಗಿದ್ದನು. ಈ ವೇಳೆ ಜೆಜೆ ನಗರದಲ್ಲಿ ಚಿಕನ್ ತರಲು ಬಂದಿದ್ದಾನೆ. ಚಿಕನ್ ಖರೀದಿ ಮಾಡುವಾಗ ಗಲಾಟೆ ನಡೆದಿದೆ. ಗಲಾಟೆ ಅತಿರೇಕಕ್ಕೆ ಹೋಗಿದ್ದು, ಮೂವರು ದುಷ್ಕರ್ಮಿಗಳು ಚಂದ್ರನನ್ನು ಚಾಕುನಿಂದ ತೊಡೆಗೆ ಚುಚ್ಚಿ ಪರಾರಿಯಾಗಿದ್ದಾರೆ.