Breaking News

ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ – ಮೂವರು ಆಸ್ಪತ್ರೆಗೆ ದಾಖಲು

Spread the love

ಚಿತ್ರದುರ್ಗ: ಫ್ಲೆಕ್ಸ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಮೂವರು ಆಸ್ಪತ್ರೆಗೆ ದಾಖಲಾಗಿರೋ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಮಂಗಳವಾರ ಹಿರಿಯೂರು ಪಟ್ಟಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಾಬುಜಗಜೀವನ್ ರಾಮ್ ಜಯಂತಿ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಮಾಜಿ ಸಚಿವ ಡಿ.ಸುಧಾಕರ್ ಹಾಗೂ ಎಂಎಲ್‍ಸಿ ಚುನಾವಣೆಯ ಪರಾಜಿತ ಅಭ್ಯರ್ಥಿ ಸೋಮಶೇಖರ್ ನಡುವೇ ಶಕ್ತಿ ಪ್ರದರ್ಶನದ ಪೈಪೋಟಿ ಶುರುವಾಗಿದೆ. ರಾಜ್ಯ ನಾಯಕರನ್ನು ಓಲೈಸಲು ಫ್ಲೆಕ್ಸ್ ಹಾಕಿಸಲು ನಾ ಮುಂದು, ನೀ ಮುಂದು ಎಂದು ಕಾರ್ಯಕರ್ತರು ಮುಗಿಬಿದ್ದಿದ್ದಾರೆ.

ಈ ವೇಳೆ ಸೋಮಶೇಖರ್ ಹಾಕಿಸಿದ್ದ ಫ್ಲೆಕ್ಸನ್ನು ಸುಧಾಕರ್ ಬೆಂಬಲಿಗರು ತೆರವುಗೊಳಿಸಿದ್ದಾರೆ. ಈ ಕಾರಣ ಆಕ್ರೋಶಗೊಂಡಿರೋ ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್‍ನಲ್ಲೂ ಅಲ್ಪಸಂಖ್ಯಾತರ ಕಡೆಗಣನೆ ಶುರುವಾಗಿದೆ ಎಂದು ಆರೋಪಿಸಿದ್ದಾರೆ.


Spread the love

About Laxminews 24x7

Check Also

ಚನ್ನಮ್ಮನ ಹೋರಾಟ ನಮಗೆ ಆದರ್ಶವಾಗಲಿ: ಸಚಿವ ಸತೀಶ ಜಾರಕಿಹೊಳಿ

Spread the love ಕಿತ್ತೂರು ಉತ್ಸವ-2025: ಚನ್ನಮ್ಮನ ಸಾಹಸಗಾಥೆಯ ಅನಾವರಣ ಚನ್ನಮ್ಮನ ಹೋರಾಟ ನಮಗೆ ಆದರ್ಶವಾಗಲಿ: ಸಚಿವ ಸತೀಶ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ