ಬೆಂಗಳೂರು: ರಾಜ್ಯದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ 150 ಸ್ಥಾನಕ್ಕಿಂತ ಒಂದು ಸ್ಥಾನವೂ ಕಡಿಮೆ ಬರಬಾರದು. ಇದು ನಾನು ನಿಮಗೆ ಕೊಡುತ್ತಿರುವ ಟಾಸ್ಕ್ ಎಂದು ಕಾಂಗ್ರೆಸ್ ನಾಯಕರಿಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.
ರಾಜ್ಯ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಕುರಿತಾಗಿ ಮಾತನಾಡಿ, ಕರ್ನಾಟಕ ಸ್ಪಿರಿಟ್ ಅಫ್ ಕಾಂಗ್ರೆಸ್ ಪಾರ್ಟಿ. ದೇಶ, ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿವೆ. ಬಿಜೆಪಿ ಸರ್ಕಾರ ಹಣದ ಮೇಲೆ ಅಧಿಕಾರಕ್ಕೆ ಬಂದಿದೆ. ಪ್ರಸಕ್ತ ವಿಷಯಗಳನ್ನು ಜನರಿಗ ಮುಟ್ಟಿಸಿ. ಪಕ್ಷದಲ್ಲಿ ಯಾರು ಕೆಲಸ ಮಾಡ್ತಾರೆ, ಯಾರು ಮಾಡುತ್ತಿಲ್ಲ ಮೊದಲು ಪತ್ತೆ ಹಚ್ಚಿ. ಎಲ್ಲರೂ ನೀವು ನೆನಪಿಡಬೇಕು. ಟಿಕೆಟ್ ನಿಮಗೆ ಸುಲಭವಾಗಿ ಸಿಗುವುದಿಲ್ಲ. ಯಾರು ಪಕ್ಷಕ್ಕಾಗಿ ದುಡಿಯುತ್ತಾರೆ ಅವರಿಗೆ ಮಾತ್ರ. ಪಕ್ಷ ಸಂಘಟನೆ ಮಾಡುವವರಿಗೆ ಟಿಕೆಟ್ ಈ ಎಲ್ಲಾ ವಿಷಯಗಳನ್ನು ಕಾರ್ಯಕರ್ತರು ಜನರಿಗೆ ತಲುಪಿಸಿ. ಸರ್ಕಾರದ ವಿರುದ್ಧ ಹೋರಾಟಗಳನ್ನು ರೂಪಿಸಿ. ಕಾರ್ಯಕರ್ತರು ಈ ಕೆಲಸ ಮೊದಲು ಮಾಡಬೇಕು ಎಂದು ಮುಖಂಡರು ಮತ್ತು ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಟಾಸ್ಕ್ ನೀಡಿದರು.