Breaking News

ಸಿಕ್ಸ್‌, ಫೋರ್‌ ಸಿಡಿಸಿ ಮ್ಯಾಚ್‌ ಫಿನಿಶ್‌ ಮಾಡಿದ ಕಾರ್ತಿಕ್

Spread the love

ಮುಂಬೈ: ಬೆಂಗಳೂರು ಮತ್ತು ಕೋಲ್ಕತ್ತಾ ನಡುವಿನ ಕೊನೆಯ ಓವರ್ ವರೆಗೂ ರೋಚಕವಾಗಿ ಕೂಡಿದ ಪಂದ್ಯದಲ್ಲಿ ಬ್ಯಾಟ್ಸ್‌ಮ್ಯಾನ್‌ ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಶ್ ಮಾಡುವ ಮೂಲಕ ಆರ್​ಸಿಬಿಗೆ 3 ವಿಕೆಟ್‍ಗಳ ಗೆಲುವು ತಂದುಕೊಟ್ಟರು.

ಆರ್​ಸಿಬಿಗೆ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 7 ರನ್‍ಗಳ ಅವಶ್ಯಕತೆ ಇತ್ತು. ರಸೆಲ್ ಎಸೆದ ಮೊದಲ ಎಸೆತವನ್ನೆ ದಿನೇಶ್ ಕಾರ್ತಿಕ್ ಸಿಕ್ಸರ್‌ಗಟ್ಟಿದರೆ, ಎರಡನೇ ಎಸೆತವನ್ನು ಬೌಂಡರಿಗಟ್ಟಿ ಆರ್​ಸಿಬಿ ತಂಡವನ್ನು ಗೆಲ್ಲಿಸಿದರು.

ಅಲ್ಪ ಮೊತ್ತದ ಗುರಿ ಪಡೆದ ಆರ್​ಸಿಬಿ ಕೂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಆಟಗಾರ ಅನುಜ್ ರಾವತ್ ಶೂನ್ಯ ಸುತ್ತಿದರೆ, ನಾಯಕ ಡು ಪ್ಲೆಸಿಸ್ 5 ರನ್‍ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 18 ರನ್ (28 ಎಸೆತ, 3 ಬೌಂಡರಿ) ಮತ್ತು ಡೇವಿಡ್ ವಿಲ್ಲಿ 18 ರನ್ (38 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈ ಚೆಲ್ಲಿದರು.

ನಂತರ ಶಹಬಾಜ್ ಅಹಮದ್ 27 ರನ್ (20 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ದಿನೇಶ್ ಕಾರ್ತಿಕ್ ಅಜೇಯ 14 ರನ್ (7 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಹರ್ಷಲ್ ಪಟೇಲ್ 10 ರನ್ (6 ಎಸೆತ, 2 ಬೌಂಡರಿ) ಸಿಡಿಸಿ 19.2 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 132 ರನ್ ಸಿಡಿಸಿ 4 ಎಸೆತ ಬಾಕಿ ಇರುವಂತೆ 3 ವಿಕೆಟ್‍ಗಳ ಗೆಲುವು ದಾಖಲಿಸಿತು.

ಈ ಮೊದಲು ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಪ್ಲೆಸಿಸ್ ಪ್ಲಾನ್ ಪ್ರಕಾರ ಬೌಲರ್‌ಗಳು ಆರಂಭದಲ್ಲೇ ಕೆಕೆಆರ್ ಬ್ಯಾಟ್ಸ್‌ಮ್ಯಾನ್‌ಗಳನ್ನು ಕಾಡಿದರು.

ಆರ್​ಸಿಬಿ ಬೌಲರ್‌ಗಳ ಬಿಗಿ ದಾಳಿ
ಕೋಲ್ಕತ್ತಾ ತಂಡ ಆರಂಭದಿಂದಲೇ ವಿಕೆಟ್ ಕೈ ಚೆಲ್ಲಿ ಆಘಾತಕ್ಕೆ ಒಳಗಾಯಿತು. ಅಜಿಂಕ್ಯಾ ರಹಾನೆ 9, ವೆಂಕಟೇಶ್ ಅಯ್ಯರ್ 10, ಶ್ರೇಯಸ್ ಅಯ್ಯರ್ 13, ನಿತೇಶ್ ರಾಣಾ 10, ಸುನೀಲ್ ನರೇನ್ 12, ಸ್ಯಾಮ್ ಬಿಲ್ಲಿಂಗ್ಸ್ 14 ರನ್ ಸಿಡಿಸಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಕೆಕೆಆರ್‌ಗೆ ಕೈ ಕೊಟ್ಟರು.


Spread the love

About Laxminews 24x7

Check Also

ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Spread the loveಧಾರವಾಡ: ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಅನುಮತಿ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್ ಏಕ ಸದಸ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ