ಮಂಗಳೂರು: ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದವರು, ಅಲ್ಲಿನ ಅಭಿವೃದ್ಧಿ ವಿಚಾರ ನೋಡುವುದು, ಹಿತ ಕಾಪಾಡುವ ಕೆಲಸ ಮಾಡಬೇಕು.
ರಾಜ್ಯದಲ್ಲೇ ಬಹುತೇಕ ಆಸ್ತಿಕರು ಭೇಟಿ ನೀಡುವ ತಾಣ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ. ಇಲ್ಲಿನ ಮಹಿಳಾ ಟ್ರಸ್ಟಿಯೋರ್ವರು ಹುಂಡಿಯ ಹಣವನ್ನೇ ನುಂಗಿ ಹಾಕಿರುವುದು ಈಗ ಬಯಲಾಗಿದೆ.
ಫೆಬ್ರವರಿಯಲ್ಲಿ ನಡೆದಿರುವ ಈ ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈಗ ವಿಚಾರ ಹಲವು ತಿರುವು ಪಡೆದುಕೊಂಡಿದೆ.
ಸ್ಥಳೀಯರು ಹಾಗೂ ದೇಗುಲದ ಭಕ್ತರು ಈ ಪ್ರಕರಣದ ಕುರಿತು ಮೈಸೂರಿನ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು, ಮಂಗಳೂರು ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದಾರೆ.
Laxmi News 24×7