Breaking News

ಪುನೀತ್ ಅಭಿಮಾನ: ಕ್ರೇನಿಗೆ ಬೆನ್ನಿನ ಮೂಲಕ ಕಬ್ಬಿಣದ ಕೊಂಡಿ ಕಟ್ಟಿಕೊಂಡು ನೇತಾಡುತ್ತಿದ್ದ ಭಕ್ತ

Spread the love

ಭದ್ರಾವತಿ: ಕೂಡ್ಲಿಗೆರೆ ಸುಬ್ರಹ್ಮಣ್ಯಸ್ವಾಮಿ ಜಾತ್ರೆ ಶುಕ್ರವಾರ ವೈಭವದಿಂದ ನಡೆಯಿತು.

ಭಕ್ತರು ದೇಹದಂಡನೆಯೊಂದಿಗೆ ಭಕ್ತಿಯ ಪರಾಕಾಷ್ಠೆ ಮೆರೆದರು.

350ಕ್ಕೂ ಹೆಚ್ಚು ಮಾಲಾಧಾರಿ ಭಕ್ತರು ತಮ್ಮ ಹರಕೆಗೆ ತಕ್ಕಂತೆ ದೇಹದಂಡನೆ ಮಾಡಿಕೊಂಡು ಸ್ವಾಮಿಯ ದರ್ಶನ ಪಡೆದರು. ಭಕ್ತರು ಆಟಗೇರಿ ಕ್ಯಾಂಪ್ ಬಳಿಯ ಚಾನಲ್ ಬಳಿಯಲ್ಲಿ ದೇಹದಂಡನೆ ಮಾಡಿಕೊಂಡು ಅಲ್ಲಿಂದ ಕೊಂಬು, ಕಹಳೆ, ವಾದ್ಯ, ಡೊಳ್ಳು, ನಗಾರಿ ಮೊದಲಾದ ವಾದ್ಯಮೇಳದೊಂದಿಗೆ ನೃತ್ಯ ಮಾಡುತ್ತ ಮೆರವಣಿಗೆಯಲ್ಲಿ ಬಂದರು.

ಕೆನ್ನೆಯ ಎರಡೂ ಬದಿಗಳಲ್ಲಿ ತ್ರಿಶೂಲ, ನಾಲಿಗೆಗೆ ತ್ರಿಶೂಲ, ಕಲ್ಲಿನ ಗುಂಡುಗಳಿಗೆ ಕಬ್ಬಿಣದ ಸರಳು ಹಾಕಿ ಅದನ್ನು ಬೆನ್ನಿಗೆ ಚುಚ್ಚಿಕೊಂಡು ಸಾಗಿದರು. ಭಕ್ತರ ಜತೆಯಲ್ಲಿ ಸಹಸ್ರಾರು ಮಂದಿ ಹೆಜ್ಜೆ ಹಾಕಿದರು. ದೇಹದಂಡನೆ ಮಾಡಿಕೊಂಡವರು ದಾರಿಯಲ್ಲಿ ಅಡ್ಡವಾಗಿ ಮಲಗಿದ್ದ ಭಕ್ತರನ್ನು ದಾಟಿಕೊಂಡು ಸಾಗಿದರು.

ಪುನೀತ್ ಅಭಿಮಾನ: ಕ್ರೇನಿಗೆ ಬೆನ್ನಿನ ಮೂಲಕ ಕಬ್ಬಿಣದ ಕೊಂಡಿ ಕಟ್ಟಿಕೊಂಡು ನೇತಾಡುತ್ತಿದ್ದ ಭಕ್ತನೊಬ್ಬ ಬೆನ್ನಿಗೆ ಕಬ್ಬಿಣದ ಸರಪಳಿ, ಕೆನ್ನೆಯ ಎರಡು ಕಡೆ ಚಾಚಿರುವ ತ್ರಿಶೂಲ, ತನ್ನ ಎರಡೂ ಕೈಯಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರವಿಟ್ಟು ತೊಟ್ಟಿಲು ತೂಗುತ್ತಿದ್ದ ದೃಶ್ಯ ನೋಡುಗರಲ್ಲಿ ಬೆರುಗು ಮೂಡಿಸಿತು.


Spread the love

About Laxminews 24x7

Check Also

ಅಯ್ಯೋ ವಿಧಿಯೇ! ಒಂದೇ ದಿನ ಹೃದಯಾಘಾತದಿಂದ ಅಣ್ಣ- ತಮ್ಮ ಸಾವು!

Spread the loveಯಾದಗಿರಿ, (ಸೆಪ್ಟೆಂಬರ್ 02): ಒಂದೇ ಕುಟುಂಬದ ಇಬ್ಬರು ಸಹೋದರರು (Br0thers) ಹೃದಯಾಘಾತಕ್ಕೆ (heart attack) ಬಲಿಯಾಗಿದ್ದು, ಅಣ್ಣ ತಮ್ಮಸಾವಿನಲ್ಲೂ ಒಂದಾಗಿದ್ದಾರೆ. ಈ ಘಟನೆ ಯಾದಗಿರಿ (Yadgir) ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ