ಸ್ಯಾಂಡಲ್ವುಡ್, ಟಾಲಿವುಡ್, ಕಿರುತೆರೆಯಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಜನಮನ್ನಣೆ ಪಡೆದಿರುವ ನಟಿ ತೇಜಸ್ವಿನಿ ಪ್ರಕಾಶ್, ಖಾಸಗಿ ಕಂಪನಿಯ ಉದ್ಯೋಗಿ ಪಣಿ ವರ್ಮಾ ಜೊತೆಗೆ ನಿನ್ನೆ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪಣಿ ಮತ್ತು ತೇಜಸ್ವಿನಿ ಹಲವು ವರ್ಷಗಳಿಂದ ಸ್ನೇಹಿತರು, ಈ ಸ್ನೇಹವೇ ಪ್ರೀತಿಗೆ ತಿರುಗಿ ಇದೀ ಹೊಸ ಜೀವನಕ್ಕೆ ನಾಂದಿ ಹಾಡಿದೆ. ಈ ಜೋಡಿಯ ಮದುವೆ ಸಂಭ್ರಮದಲ್ಲಿ ವಧು, ವರರ ಕುಟುಂಬಸ್ಥರು, ಅನೇಕ ಸಿನಿ ಮತ್ತು ಕಿರುತೆರೆ ಕಲಾವಿದರು ಭಾಗಿಯಾಗಿದ್ದರು. ಮದುವೆ ಅದ್ಧೂರಿಯಾಗಿ ನಡೆದದ್ದು ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ತೇಜಸ್ವಿನಿ ಮದುವೆಯಲ್ಲಿ ಕಿರುತೆರೆ ಸ್ನೇಹಿತರು, ನಟ ಪ್ರೇಮ್ ನೆನಪಿರಲಿ, ಸಿಹಿ ಕಹಿ ಚಂದ್ರು ಮತ್ತು ನಿರ್ದೇಶಕ ತರುಣ್ ಸುಧೀರ್, ನಟಿ ಕಾರಣ್ಯ ರಾಮ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದಾರೆ.