ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಬಳಿಯಲ್ಲಿ ಖಾಸಗಿ ಬಸ್ ಅಪಘಾತಗೊಂಡು ಭೀಕರ ದುರ್ಘಟನೆ ನಂತ್ರ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ದುರಂತದ ಬಳಿಕ 7 ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರವನ್ನು, ಈ ಮಾರ್ಗದಲ್ಲಿ ಆರಂಭಿಸಿದೆ.
ಹೌದು.. ಪಳವಳ್ಳಿ ಕಟ್ಟೆ ಬಳಿಯಲ್ಲಿನ ಖಾಸಗಿ ಬಸ್ ಅಪಘಾತದ ಬಳಿಕ, 24 ಗಂಟೆಯೊಳಗೆ ಕೆ ಎಸ್ ಆರ್ ಟಿ ಸಿ ಚುರುಕುಗೊಂಡಿದ್ದು, ವೈ ಎನ್ ಹೊಸಕೋಟೆ ಟು ಪಾವಗಡ ಮಾರ್ಗಕ್ಕೆ ಭಾನುವಾರದಿಂದ ಒಂದಲ್ಲ ಎರಡಲ್ಲ 7 ಬಸ್ ಗಳನ್ನು ಸಂಚಾರಕ್ಕಾಗಿ ನಿಯೋಜಿಸಲಾಗಿದೆ.
ಈ ಘಟನೆಯ ಬಳಿಕ ತತ್ ಕ್ಷಣವೇ ಸ್ಪಂದಿಸಿರುವಂತ ಸಾರಿಗೆ ಸಚಿವ ಬಿ.ಶ್ರೀರಾಮುಲು, ಕೆ ಎಸ್ ಆರ್ ಟಿ ಸಿ ಬಸ್ ವ್ಯವಸ್ಥೆಗೆ ಕ್ರಮ ಕೈಗೊಂಡು, ಮತ್ತೆ ಮುಂದೆ ಯಾವುದೇ ರೀತಿಯಾದಂತ, ಖಾಸಗಿ ಬಸ್ ಅಪಘಾತದಂತ ದುರಂತ ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದಾರೆ.
Laxmi News 24×7