ಹಾವೇರಿ: ಉಕ್ರೇನ್ನ ದಾಳಿಯಲ್ಲಿ ಸಾವನ್ನಪ್ಪಿದ ನವೀನ್ ಮೃತದೇಹವನ್ನು ತವರಿಗೆ ತರಲಾಗಿದ್ದು, ನವೀನ್ ದೇಹದಾನಕ್ಕೆ ಪ್ರಕ್ರಿಯೆ ಸ್ಟಾರ್ಟ್ ಆಗಿದೆ. ನವೀನ ದೇಹದಾನ ಮಾಡುವ ಮೂಲಕ ಆತನ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅಧಿಕಾರಿಗಳು ದೇಹದಾನ ವಿಧೇಯಕ ಪತ್ರ ತಂದಿದ್ದು, ಪ್ರಕ್ರಿಯೆ ಆರಂಭಿಸಿದ್ದಾರೆ. ನವೀನ್ ದೇಹವನ್ನು ದಾವಣಗೆರೆಯ ಎಸ್.ಎಸ್.ಆಸ್ಪತ್ರೆಗೆ ನೀಡಲಾಗುತ್ತದೆ.
ಇಂದು ಸಂಜೆ ಮೃತದೇಹ ಆಸ್ಪತ್ರೆಗೆ ಹಸ್ತಾಂತರವಾಗಲಿದೆ. ನವೀನ್ ಉಕ್ರೇನ್ನಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ. ವೈದ್ಯಲೋಕಕ್ಕೆ ನಾನು ಏನಾದ್ರು ಮಾಡಬೇಕು ಎನ್ನುತ್ತಿದ್ದ ,ಡಾಕ್ಟರ್ ಆಗಿ ನನ್ನ ಮಗ ಆಸೆ ಪೂರೈಸಿಕೊಳ್ಳಲಿಲ್ಲ. ಸತ್ತ ಮೇಲಾದ್ರೂ ಮೆಡಿಕಲ್ ವಿದ್ಯಾರ್ಥಿಗಳಿಗೆ ನೆರವಾಗಲಿ ಎಂದು ನವೀನ್ ತಂದೆ ಶೇಖರ್ ಗ್ಯಾನಗೌಡರ್ ತಿಳಿಸಿದ್ದಾರೆ.
ಅಂತಿಮ ದರ್ಶನದ ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ದೇಹದಾನ ಮಾಡಲಾಗುವುದು.