ಹಾವೇರಿ : ಉಕ್ರೇನ್-ರಷ್ಯಾ ಯುದ್ಧದಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ ಸ್ವಗ್ರಾಮ ತಲುಪಿದ್ದು, ವೀರಶೈವ ಸಂಪ್ರದಾಯದ ವಿಧಿ – ವಿಧಾನದಂತೆ ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಈ ವೇಳೆ ನವೀನ್ ತಾಯಿ ವಿಜಯಲಕ್ಷ್ಮಿ, ಮಗನಿಗೆ ಸೆಲ್ಯೂಟ್ ಹೊಡೆದರು.
ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್ ನಿವಾಸದಲ್ಲಿ ತಂದೆ ಶೇಖರಪ್ಪ, ತಾಯಿ ವಿಜಯಲಕ್ಷ್ಮಿ, ಸಹೋದರ ಹರ್ಷ ಸೇರಿದಂತೆ ಸಂಬಂಧಿಕರು ನವೀನ್ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ ಸಲ್ಲಿಸಿದರು. ಇದೇ ವೇಳೆ, ಸಹೋದರ ಹರ್ಷ ತಾಯಿಯನ್ನು ಅಪ್ಪಿಕೊಂಡು ಕಣ್ಣೀರಿಟ್ಟರು.
‘ಡಾಕ್ಟರ್ ಆಗಿ ಬರ್ತಿನಿ ಅಂದಿದ್ಯಲ್ಲೊ, ನಿನಗೆ ಸೆಲ್ಯೂಟ್ ಕಣೋ’ ಎಂದು ನವೀನ್ ತಾಯಿ ವಿಜಯಲಕ್ಷ್ಮಿಯವರು, ಮೃತ ಮಗ ನವೀನ್ಗೆ ಎರಡು ಕೈಯಿಂದ ಸೆಲ್ಯೂಟ್ ಹೊಡೆದು ಕಣ್ಣೀರಿಟ್ಟರು.
Laxmi News 24×7