ಮಂಗಳೂರು: ‘ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು’ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ನೀಡಿದ್ದಾರೆ.
ಕರಾವಳಿಯ ಕಾರ್ನಿಕ ದೈವ ಕೊರಗಜ್ಜ ಕ್ಷೇತ್ರದ ಕಡೆ ಭಕ್ತರ ನಡಿಗೆ ಎಂಬ ಹೆಸರಿನಲ್ಲಿ ನಡೆದ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಮಂಗಳೂರಿನಲ್ಲಿ ಬೃಹತ್ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು ಎಂದು ಅವರು ಹೇಳಿದರು.
ಇದಕ್ಕೆ ಕಾರಣ ನೀಡಿದ ಅವರು, ಈ ಮೂರು ಬಣ್ಣದ ಧ್ವಜ ಯಾರು ನಿರ್ಮಾಣ ಮಾಡಿದ್ದು, ಇದಕ್ಕೆ ಮೊದಲು ಯಾವ ಧ್ವಜ ಇತ್ತು ಎಂಬ ಬಗ್ಗೆ ವಿವರಿಸಿದರು.