ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸಪ್ಪನಿಗೆ ಮಹಿಳೆ ಚಪ್ಪಲಿ ಸೇವೆ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಲಕ್ನೋದ ಚಾರ್ ಬಾಗ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಹಾಗೂ ಒಬ್ಬ ವ್ಯಕ್ತಿ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಮಹಿಳೆ ತನ್ನ ಚಪ್ಪಲಿಯಿಂದ ಪೊಲೀಸಪ್ಪನಿಗೆ ಹೊಡೆದಿದ್ದಾರೆ.
ಪೊಲೀಸ್ ಮಹಿಳೆಯನ್ನು ದೂರ ತಳ್ಳುವುದು ಮತ್ತು ವ್ಯಕ್ತಿಯನ್ನು ಲಾಠಿಯಿಂದ ಥಳಿಸುವುದು ಕೂಡ ವಿಡಿಯೋದಲ್ಲಿ ಕಾಣಿಸಿದೆ. ಮಹಿಳಾ ಸಿಬ್ಬಂದಿ ಅಲ್ಲಿದ್ದು ಇಡೀ ಘಟನೆ ನೋಡುತ್ತಾರೆ, ಜಗಳ ಬಿಡಿಸಲು ಅವರಿಂದಲೂ ಸಾಧ್ಯವಾಗಲಿಲ್ಲ. ದಾರಿಹೋಕರೊಬ್ಬರು ರೆಕಾರ್ಡ್ ಮಾಡಿದ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ.
ವಿಡಿಯೋ ಗಮನಿಸಿದ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದು, ಒಬ್ಬರಂತೂ ಪೊಲೀಸ್ ಸಿಬ್ಬಂದಿ ಕುಡಿದಿದ್ದರೇ ಎಂದು ಪ್ರಶ್ನೆ ಮಾಡಿದ್ದಾರೆ.