ಧಾರವಾಡ: ಸಿದ್ದರಾಮಯ್ಯ ಅವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಅವರಿಗೆ ಹಿಂದಿ ಬರುವುದಿಲ್ಲ, ಹೀಗಾಗಿ ಸಿನಿಮಾ ನೋಡುವುದಿಲ್ಲ ಅಂತಾರೆ. ಬೇರೆ ಸಿನಿಮಾ ನೋಡೋಕೆ ಹೋಗುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧದಿಂದಲೇ ಸಿನಿಮಾ ಜನಪ್ರಿಯ ಆಗಿದೆ. ಸಿದ್ದರಾಮಯ್ಯ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಅವರಿಗೆ ಹಿಂದಿ ಬರುವುದಿಲ್ಲ ನೋಡುವುದಿಲ್ಲ. ಬೇರೆ ಸಿನಿಮಾ ನೋಡಲು ಹೋಗುತ್ತಾರೆ. ಈ ಸಿನಿಮಾಗೆ ಇಂಗ್ಲೀಷ್ ಸಬ್ ಟೈಟಲ್ ಇದೆ. ಇಂಗ್ಲೀಷ್ ಬರೋಲ್ವಾ? ನಿಮಗೆ ಪಕ್ಕದಲ್ಲಿ ಓರ್ವ ಅನುವಾದಕರನ್ನು ಕುಳ್ಳಿರಿಸಿಕೊಂಡು ನೋಡಿ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಕಾಶ್ಮೀರಿ ಪಂಡಿತರ ಸರ್ವೆ ಈಗ ಆಗಿದೆ ಅಂತಾ ಮಾಹಿತಿ ಬಂದಿದೆ. ಅವರು ಬಯಸಿದಲ್ಲಿ ವಸತಿ ಕಲ್ಪಸಿ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕಾರಣ ಮಾಡುತ್ತ ಬಂದಿದೆ. ಕಾಶ್ಮೀರ ಫೈಲ್ಸ್‌ಗೆ ವಿರೋಧ ಮಾಡೋದಕ್ಕೆ ಇದೇ ಕಾರಣ. 70 ವರ್ಷದಲ್ಲಿ 58 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು, ಆಗ ತುಷ್ಟೀಕರಣ ರಾಜಕಣರಣ, ಆರ್ಟಿಕಲ್ 370, ಕಾಶ್ಮೀರಕ್ಕೆ 35ಎ ಕೊಟ್ಟಿದ್ದರು, ಇದನ್ನೆಲ್ಲ ಕೊಟ್ಟು ಭಾರತದ ಕಾನೂನು ನಡೆಯದಂತೆ ಮಾಡಿದ್ದರು. ಇದನ್ನೆಲ್ಲ ಮುಚ್ಚಿ ಹಾಕಲು ಕಾಶ್ಮೀರ ಫೈಲ್ಸ್ ಸಿನಿಮಾ ವಿರೋಧಿಸುತ್ತಿದ್ದಾರೆ.