ರಾಜಸ್ಥಾನದ ಜೈಪುರದಲ್ಲಿ ನೆದರ್ಲ್ಯಾಂಡ್ನ ಮಹಿಳೆಯನ್ನು ಅತ್ಯಾಚಾರ ಮಾಡಿದ ದಾರುಣ ಘಟನೆಯು ವರದಿಯಾಗಿದೆ. ಜೈಪುರ ನಗರದ ಹೋಟೆಲ್ ಒಂದರಲ್ಲಿ ಈ ಘಟನೆ ಸಂಭವಿಸಿದೆ.
ಆರ್ಯುವೇದಿಕ್ ಮಸಾಜ್ ಕೊಡಿಸುತ್ತೇನೆಂದು ನಂಬಿಸಿ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯು ನೆದರ್ಲ್ಯಾಂಡ್ನ ನಿವಾಸಿಯಾಗಿದ್ದು . ರಾಜಸ್ಥಾನಕ್ಕೆ ಭೇಟಿ ನೀಡಿದ್ದರು.
ಸಿಂಧಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ನಾಲ್ಕು ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದರು.
ಆರೋಪಿ ಕೇರಳ ನಿವಾಸಿಯಾಗಿದ್ದಾನೆ. ಈತ ಜೈಪುರದ ಖತಿಪುರದಲ್ಲಿ ಮಸಾಜ್ ಸೇವಾ ಪೂರೈಕೆದಾರರಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕೇರಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
Laxmi News 24×7