Breaking News

‘ದಿ ಕಾಶ್ಮೀರ್ ಫೈಲ್ಸ್’ ಬೆನ್ನಲ್ಲೇ ‘ಗುಜರಾತ್ ಫೈಲ್ಸ್’ ಚಿತ್ರಕ್ಕೆ ತಯಾರಿ, ಮೋದಿಗೆ ಸವಾಲೊಡ್ಡಿದ ನಿರ್ದೇಶಕ

Spread the love

ದಿ ಕಾಶ್ಮೀರ್ ಫುಲ್ಸ್’ ಸಿನಿಮಾ ರಿಲೀಸ್ ಆದಾಗಿನಿಂದಲೂ ಚಿತ್ರದ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆ ಆಗುತ್ತಲೇ ಇದೆ. ಒಂದು ಕೋಮಿನ ಜನರನ್ನು ಪ್ರಮುಖರನ್ನಾಗಿಸಿ ಈ ಚಿತ್ರ ತೆರೆಗೆ ತರಲಾಗಿದೆ ಎಂಬ ವಾದ ಕೂಡ ಎದ್ದಿದೆ.

ಮತ್ತೊಂದು ಕಡೆ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಹಲವು ಕಡೆಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದ್ದು, ಚಿತ್ರವನ್ನು ಎಲ್ಲರೂ ನೋಡಬೇಕು ಎಂದು ರಾಜಕೀಯ ಮುಖಂಡರು ಹೇಳುತ್ತಿದ್ದಾರೆ.

ಇದರ ನಡುವೆ ಹಲವು ರಾಜಕೀಯ ಗಣ್ಯರು ಈ ಸಿನಿಮಾ ನೋಡಿ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ. ಇಂತಹ ಸಿನಿಮಾಗಳನ್ನು ಜನ ನೋಡಿ ಹಿಂದಿನ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂದಿದ್ದಾರೆ. ಸ್ವತಃ ಪಿ.ಎಂ ನರೇಂದ್ರ ಮೋದಿ ಕೂಡ ಈ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಈ ಸಿನಿಮಾಗೆ ಸಿಕ್ತಿರೋ ರೆಸ್ಪಾನ್ಸ್ ಬೆನ್ನಲ್ಲೇ ಇದೀಗ ಮತ್ತೊಂದು ಸಿನಿಮಾ ಮಾಡಲು ಬಾಲಿವುಡ್ ನಿರ್ದೇಶಕರು ಮುಂದೆ ಬಂದಿದ್ದಾರೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ