ಖೈದಿ ಖಾದಿರಸಾಬ್ ರಾಜೇಖಾನ್ (34) ಎಂಬಾತ ಜೈಲಿನಿಂದಲೇ ಪರಾರಿ ಆಗಿದ್ದಾನೆ. ಜೈಲು ಸಿಬ್ಬಂದಿ ಗಮನ ಬೇರೆಡೆ ಸೆಳೆದು ಸಬ್ ಜೈಲಿನ ಮುಖ್ಯ ದ್ವಾರದಿಂದಲೇ ಆರೋಪಿ ಎಸ್ಕೇಪ್ ಆಗಿದ್ದಾನೆ. ಕೀ ಓಪನ್ ಮಾಡಿಕೊಂಡು ವಿಚಾರಣಾಧೀನ ಕೈದಿ ಪರಾರಿ ಆಗಿದ್ದು ಹೆಚ್ಚುವರಿ ಎಸ್ಪಿ ಮಾನಿಂಗ ನಂದಗಾವಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಆರೋಪಿ ಖಾದಿರಸಾಬ್ ರಾಜೇಖಾನ್ನನ್ನು 15 ದಿನದ ಹಿಂದೆ ಬಂಧಿಸಲಾಗಿತ್ತು. ಕೊಲೆ ಯತ್ನ, ಗಲಾಟೆ, ಜಾತಿನಿಂದನೆ ಸೇರಿದಂತೆ ಒಟ್ಟು 6 ಪ್ರಕರಣದಲ್ಲಿ ಆತ ಭಾಗಿಯಾಗಿದ್ದ. ಇದೀಗ ಜೈಲು ಸೇರಿ 15 ದಿನಗಳಲ್ಲೇ ಆರೋಪಿ ಪರಾರಿ ಆಗಿದ್ದಾನೆ. ಪೊಲೀಸರ ಗಮನ ಬೇರೆಡೆ ಸೆಳೆದು ತಪ್ಪಿಸಿಕೊಂಡಿದ್ದಾನೆ.