ಬೆಂಗಳೂರು: ಸುಮಾರು 2 ಸಾವಿರ ಪ್ರಯಾಣಿಕರಿದ್ದ ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ನಿನ್ನೆ ಗುರುವಾರ ಬೆಳಗ್ಗೆ 6.40 ರ ಸುಮಾರಿಗೆ ನೆಲಮಂಗಲದ ಗೋಲಹಳ್ಳಿ ಮತ್ತು ದೊಡ್ಡಬೆಲೆ ರೈಲು ನಿಲ್ದಾಣಗಳ ನಡುವೆ ಎಂಜಿನ್ ಕೆಟ್ಟುಹೋಗಿ ನಿಂತಿತು.
ನಂತರ ಡೀಸೆಲ್ ಲೊಕೊವನ್ನು ಬದಲಾಯಿಸಿ ರೈಲು ಕೊನೆಗೆ 2.20 ಗಂಟೆ ತಡವಾಗಿ ಹೊರಟಿತು. ಡೀಸೆಲ್ ಎಂಜಿನ್ ರೈಲು ಸಂಖ್ಯೆ 12079ರಲ್ಲಿ ನಿನ್ನೆ ದೋಷ ಕಂಡುಬಂದು ಲೊಕೊ-ಪೈಲಟ್‌ನ ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ಸ್ಟಾರ್ಟ್ ಆಗಲೇ ಇಲ್ಲ.
ಎರಡು ವಾಹನಗಳನ್ನು ತಂದು ನಿನ್ನೆ ಬೆಳಗ್ಗೆ 8.20ರ ಹೊತ್ತಿಗೆ ದೊಡ್ಡಬೆಲೆಗೆ ರೈಲನ್ನು ಎಳೆದರು. ಕೊನೆಗೆ ಎಂಜಿನ್ ನ್ನು ಬದಲಿಸಿ ಬೆಳಗ್ಗೆ 8.59ಕ್ಕೆ ರೈಲು ಹೊರಟಿತು.
ಈ ಮಾರ್ಗದಲ್ಲಿ ಹೀಗೆ ಹಲವು ರೈಲುಗಳು ವಿಳಂಬಗೊಂಡಿವೆ. ಆದರೆ, ಬೆಂಗಳೂರು ವಿಭಾಗದ ಅಧಿಕಾರಿಗಳು ವಿಳಂಬವಾದ ರೈಲುಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಅವರ ಬಳಿ ಮಾಹಿತಿಯಿಲ್ಲ. ನೈಋತ್ಯ ರೈಲ್ವೆಯ ಸಿಪಿಆರ್‌ಒ ಅಧಿಕಾರಿ ಅನೀಶ್ ಹೆಗ್ಡೆ ಮಾತನಾಡಿ, ದೊಡ್ಡಬೆಲೆ ಬಳಿ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ, ತಾಂತ್ರಿಕ ದೋಷಕ್ಕೆ ಕಾರಣವನ್ನು ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ.