ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲು 3 ಕೋಟಿ ರೂ.ಗೆ ಬೇಡಿಕೆ ಬಂದಿತ್ತು ಎಂದು ಸಚಿವರ ಪುತ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯವು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಫೆ.23ರಂದು ಬಂಧಿಸಿದೆ. ಸಚಿವರ ಪುತ್ರ ಅಮೀರ್ ಮಲಿಕ್ ನೀಡಿದ ದೂರಿನ ಮೇರೆಗೆ ವಿಬಿ ನಗರ ಪೊಲೀಸರು ಬುಧವಾರ ತಡರಾತ್ರಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ದೂರುದಾರರ ಪ್ರಕಾರ, ಇಮ್ತಿಯಾಜ್ ಎಂದು ತನ್ನನ್ನು ಗುರುತಿಸಿಕೊಂಡ ಒಬ್ಬರು ಇಮೇಲ್ ಕಳುಹಿಸಿದ್ದಾರೆ. ಮಲಿಕ್ ಅವರನ್ನು ಜಾಮೀನಿನ ಮೇಲೆ ಹೊರತರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಅದಕ್ಕಾಗಿ 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರನಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ತನಿಖೆ ಹಿನ್ನೆಲೆಯಲ್ಲಿ ಗೌಪ್ಯತೆ ಕಾಪಾಡಬೇಕಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ವಿವರ ನೀಡಲಾಗುವುದು ಎಂದು ಅಮಿರ್ ಮಲಿಕ್ ತಿಳಿಸಿದ್ದಾರೆ.
Laxmi News 24×7