Breaking News

ಮುಸ್ಲಿಂ ಯುವತಿ, ಹಿಂದೂ ಯುವಕನ ಪ್ರೇಮ್ ಕಹಾನಿ; ತಂಗಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟ ರೌಡಿಶೀಟರ್!

Spread the love

ದೇಶ ಅಭಿವೃದ್ಧಿ ಪಥದತ್ತ ಸಾಗಿದೆ ಆದ್ರೆ ನಮ್ಮಲ್ಲಿ ಜಾತಿ (Caste), ಧರ್ಮದ (Religion)) ಪಿಡುಗು ಮಾತ್ರ ಕಡಿಮೆಯಾಗಿಲ್ಲ. ಹೌದು ಇಲ್ಲೊಬ್ಬ ಬೇರೆ ಧರ್ಮದ ಹುಡುಗನನ್ನು ಪ್ರೀತಿಸಿ ವಿವಾಹವಾಗಿದ್ದಕ್ಕೆ (Love Marriage) ತಂಗಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟಿದ್ದಾನೆ. ಜಾತಿ, ಧರ್ಮದ ಪಿಡುಗು ಜನರನ್ನ ಎಷ್ಟರ ಮಟ್ಟಿಗೆ ಆವರಿಸಿದೆ ಅಂದ್ರೆ ಕರುಳ ಸಂಬಂಧ, ರಕ್ತ ಸಂಬಂಧಗಳಿಗೂ ಜನ ಬೆಲೆ ಕೊಡದೆ ಜಾತಿ, ಧರ್ಮ ಹಾಗೂ ಮಾನ-ಮಾರ್ಯಾದೆ ಅಂತ ಮಚ್ಚು-ಕೊಡಲಿ ಹಿಡಿದು ಕೊಲೆ ಮಾಡಲು ಮುಂದಾಗುವಂತೆ ಮಾಡಿದೆ.
ಬೇರೆ ಜಾತಿ, ಧರ್ಮದವರನ್ನ ವಿವಾಹವಾಗೋದು ಮಹಾ ಅಪರಾಧವೆನ್ನುವಂತೆ ಆಡ್ತಿದ್ದಾರೆ. ಇಲ್ಲೊಬ್ಬ ರೌಡಿಶೀಟರ್​ ಜಿಲಾನಿ​ ಎಂಬಾತನ ತಂಗಿ (Sister), ಹಿಂದೂ ಯುವಕ ರಾಹುಲ್ (Rahul)​ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಳು. ಇದನ್ನು ಸಹಿಸದ ಜಿಲಾನಿ​ ರಾಹುಲ್​ ಕೊಲೆಗೆ (Murder) ಸುಪಾರಿ ಕೊಟ್ಟು ಸಿಕ್ಕಿಬಿದ್ದಿದ್ದಾನೆ

ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮ್​ ಕಹಾನಿ

ರೌಡಿಶೀಟರ್​ ಜಿಲಾನಿ​ ಎಂಬಾತನ ತಂಗಿ, ಹಿಂದೂ ಯುವಕ ರಾಹುಲ್​ ಎಂಬಾತನನ್ನು ಪ್ರೀತಿ ಮಾಡ್ತಿದ್ದಳು. ಹಲವು ವರ್ಷಗಳಿಂದ ಇಬ್ಬರು ಪ್ರೀತಿ ಮಾಡ್ತಿದ್ದ ವಿಷಯ ಜಿಲಾಲ್​​ಗೆ ತಿಳಿದಿರಲಿಲ್ಲ. ಜಿಲಾನಿ ಇಲ್ಲದ ಸಮಯದಲ್ಲಿ ಯುವತಿ ಹಾಗೂ ರಾಹುಲ್​ ಇಬ್ಬರು ವಿವಾಹವಾಗಿದ್ದಾರೆ. ಇದ್ರಿಂದ ಕೋಪಗೊಂಡ ಜಿಲಾನಿ​ ತಂಗಿ ಗಂಡನನ್ನು ಕೊಲೆ ಮಾಡುವಂತೆ ತನ್ನ ನಾಲ್ವರು ಸ್ನೇಹಿತರಿಗೆ ಸುಪಾರಿ ಕೊಟ್ಟಿದ್ದಾನೆ.

ಕೊಲೆ ಮಾಡಿ ಜೈಲು ಸೇರಿದ್ದ ಜಿಲಾನಿ​

ವಿವಿ ಪುರಂನಲ್ಲಿ ರೌಡಿಸಂ ಮಾಡಿಕೊಂಡಿದ್ದ ಜಿಲಾನಿ, ಒಂದು ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ. ಅಣ್ಣ ಜಿಲಾನಿ ಜೈಲಿನಲ್ಲಿದ್ದ ವೇಳೆ ತಂಗಿ, ರಾಹುಲ್​ನನ್ನು ಪ್ರೀತಿಸಿ ವಿವಾಹವಾಗಿದ್ದಾಳೆ. ನಾನು ಮನೆಯಲ್ಲಿ ಇಲ್ಲದ ವೇಳೆ ತನ್ನ ಹಾಗೂ ಪೋಷಕರ ಅನುಮತಿ ಪಡೆಯದೇ ಯುವತಿ ರಾಹುಲ್​ನನ್ನ ಮದುವೆಯಾಗಿದ್ದಕ್ಕೆ ಜಿಲಾನಿ ಕೋಪಕೊಂಡಿದ್ದ. ಇದಕ್ಕೆಲ್ಲಾ ರಾಹುಲ್​ ಕಾರಣ ಅವನೇ ತನ್ನ ತಂಗಿಯನ್ನ ನಂಬಿಸಿ ಮದುವೆಯಾಗಿದ್ದಾನೆ ಅಂತ ಮೇಲೆ ಜಿಲಾನಿ ದ್ವೇಷ ಬೆಳೆಸಿಕೊಂಡಿದ್ದ. ಸರಿಯಾದ ಸಮಯ ನೋಡಿ ಆತನನ್ನು ಕೊಲ್ಲಲ್ಲು ಹೊಂಚು ಹಾಕ್ತಿದ್ದ.

Hassan: ಮನೆಗೆ ಹೊರಟವನನ್ನು ಕರೆದು ಕೊಂದೇ ಬಿಟ್ರು, ನಾಲ್ವರು ಅರೆಸ್ಟ್: ಪೊಲೀಸರ ಮಿಂಚಿನ ಕಾರ್ಯಚರಣೆ ಹೀಗಿತ್ತು

ನಾಲ್ವರಿಗೆ ಸುಪಾರಿ ಕೊಟ್ಟ ಜಿಲಾನಿ

ಜಿಲಾನಿ ಜೈಲಿನಲ್ಲಿರುವಾಗಲೇ ರಾಹುಲ್ ನನ್ನ ಹತ್ಯೆ ಮಾಡಲು ಸ್ಕೆಚ್ ರೆಡಿ ಮಾಡಿಕೊಂಡಿದ್ದ. ತನ್ನ ನಾಲ್ವರು ಸಹಚರರಿಗೆ ಹಣ ಕೊಟ್ಟು ರಾಹುಲ್​ನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾನೆ. ಜೈಲಿನಲ್ಲಿ ಇರುವಾಗ್ಲೆ ಕೊಲೆಗೆ ಸ್ಕೆಚ್​ ರೂಪಿಸಿದ್ದ ಜಿಲಾನಿ ಈ ಬಗ್ಗೆ ತನ್ನ ಸಹಚರರಿಂದ ಎಲ್ಲಾ ಮಾಹಿತಿ ಪಡೆದಿದ್ದಾನೆ. ರಾಹುಲ್​ ಕೊಲೆ ಮಾಡಲು ಜಿಲಾನಿ ಸಹಚರರು ಹಲವು ದಿನಗಳಿಂದ ಹೊಂಚು ಹಾಕುತ್ತಿದ್ರು.

ಸಿಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ತಡರಾತ್ರಿ ರಾಹುಲ್​ನನ್ನ ರಾಹುಲ್​ನನ್ನು ಕೊಲೆ ಮಾಡಲು ನಾಲ್ವರು ಸ್ಕೆಚ್​ ಹಾಕಿಕೊಂಡಿದ್ರು. ಇದಕ್ಕೆ ಬೇಕಾದ ತಯಾರಿಗಳನ್ನು ಸಹ ಮಾಡಿಕೊಂಡಿದ್ರು. ಮಾರಕಾಸ್ತ್ರ ಸಮೇತ ರಾಹುಲ್ ನನ್ನ ಕೊಲೆ ಮಾಡಲು ಬಂದಿದ್ದ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕೊಲೆ ಮಾಡಲು ಸಂಚು ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Spread the loveಧಾರವಾಡ: ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಅನುಮತಿ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್ ಏಕ ಸದಸ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ