ಪೊಲೀಸ್ ಹುದ್ದೆಗೆ ಅರ್ಜಿ ಅಹ್ವಾನ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಅಧಿಸೂಚನೆ
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ಭರ್ತಿ ಗೆ ಅಧಿಸೂಚನೆ
ಬೆಂಗಳೂರು ನಗರ 593, ರೈಲ್ವೆ ಮತ್ತು ಬೆಂಗಳೂರು ಗ್ರಾ 35
ಪದವಿ ಅಥವಾ ತತ್ಸಮಾನ ಪದವಿಯನ್ನು ಹೊಂದಿರಬೇಕು
ಬೆಂಗಳೂರು : ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು 1500 ಸ್ಥಾನಗಳನ್ನು ಭರ್ತಿ ಮಾಡ ಲು ಅಧಿಸೂಚನೆ ಹೊರಡಿಸಲಾಗಿದೆ .
ಬೆಂಗಳೂರು ನಗರ 593, ರೈಲ್ವೆ & ಬೆಂಗಳೂರು – 35, ಕಲಬುರಗಿ ನಗರ- 20, ಕಲಬುರಗಿ ಜಿಲ್ಲೆ – 10, ಬೀದರ್ – 79,
ಯಾದಗಿರಿ- 25, ಬಳ್ಳಾರಿ/ವಿಜಯನಗರ – 107, ರಾಯಚೂರು- 63, ಕೊಪ್ಪಳ – 38, ಮೈಸೂರು ನಗರ – 25, ಮಂಗಳೂರು ನಗರ- 50, ಹುಬ್ಬಳ್ಳಿ-ಧಾರವಾಡ ನಗರ – 45,
ಬೆಳಗಾವಿ ನಗರ- 75, ಬೆಂಗಳೂರು ಜಿಲ್ಲೆ – 60, ತುಮಕೂರು – 45, ರಾಮನಗರ – 30, ಮೈಸೂರು- 40, ಹಾಸನ – 30, ಮಂಡ್ಯ 30,
ಶಿವಮೊಗ್ಗ 25, ದಕ್ಷಿಣ ಕನ್ನಡ , ಮಂಗಳೂರು- 45, ಬೆಳಗಾವಿಗೆ – 30 ಸ್ಥಾನಗಳನ್ನ ಮೀಸಲಿರಿಸಲಾಗಿದೆ.
ಅರ್ಜಿಸಲ್ಲಿಸಲು ಅಭ್ಯರ್ಥಿ ಯು.ಜಿ.ಸಿಯಿಂದ ಮಾನ್ಯತೆ ಪಡೆದಿರುವ ಅಂಗೀಕೃತ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಹೊಂದಿರಬೇಕು.
ಕ ನಿಷ್ಠ 21 ವರ್ಷ ವಯೋಮಾನದವರಾಗಿರಬೇಕು. ಆಸಕ್ತರು ಏ ಪ್ರಿಲ್ 1 ರಿಂದ 30 ರವರೆಗೆ ಕರ್ನಾಟಕ ರಾಜ್ಯ ಪೊಲೀಸ್ ವೆಬ್ ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
karnataka-state-police-recruitment-2022
Laxmi News 24×7