ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಯ್ತು. ಈ ವೇಳೆ ಮಾತನಾಡಿದ ಶಾಸಕ ಸುರೇಶ್ ಕುಮಾರ್, ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೋಡಿದರೆ ನಾವು ನಾಯಿಗಳಾಗುವುದು ಉತ್ತಮ ಎನ್ನಿಸುತ್ತದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಮಾರ್ಮಿಕವಾಗಿ ಆಕ್ರೋಶ ಹೊರಹಾಕಿದರು.
ಬೀದಿ ನಾಯಿಗಳ ಹಾವಳಿ ವಿಚಾರವಾಗಿ ಆಡಳಿತ ಪಕ್ಷದ ಸದಸ್ಯರೇ ಸರ್ಕಾರವನ್ನು ತಿವಿದು ಕ್ರಮ ವಹಿಸುವಂತೆ ಆಗ್ರಹಿಸಿದ್ರು. ಪ್ರಶ್ನೋತ್ತರ ಕಲಾಪದಲ್ಲಿ ಬೆಂಗಳೂರಿನ ಬೀದಿನಾಯಿಗಳ ಸಮಸ್ಯೆ ಬಗ್ಗೆ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಪ್ರಶ್ನೆ ಮಾಡಿದರು. ಬೆಂಗಳೂರು ಹೊರ ವಲಯದಲ್ಲಿ ಜಾಗ ನೀಡಿ ಗೋ ಶಾಲೆಗಳ ಮಾದರಿ ನಾಯಿ ಶಾಲೆ ಮಾಡುವ ಬಗ್ಗೆ ಆದರೂ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಇದೇ ವೇಳೆ ಶಾಸಕ ಸುರೇಶ್‍ಕುಮಾರ್ ಮಾತನಾಡಿ, ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೋಡಿದರೆ ನಾವು ನಾಯಿಗಳಾಗುವುದು ಉತ್ತಮ ಎನ್ನಿಸುತ್ತದೆ ಎಂದು ಮಾರ್ಮಿಕವಾಗಿ ಆಕ್ರೋಶ ಹೊರಹಾಕಿದ್ರು. ಮುಖ್ಯ ಸಚೇತಕ ಸತೀಶ್ ರೆಡ್ಡಿ ಕೂಡ ನಾಯಿಗಳ ಹಾವಳಿಗೆ ಕ್ರಮ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.