Breaking News

H.D.K. ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ: ಸಿ.ಪಿ.ಯೋಗೇಶ್ವರ್

Spread the love

ರಾಮನಗರ: ಕುಮಾರಸ್ವಾಮಿ ವಿಚಾರ ಇಡೀ ಕರ್ನಾಟಕದ ಜನರಿಗೆ ಗೊತ್ತಿದೆ. ಈ ವಿಚಾರವನ್ನು ನನ್ನ ಬಾಯಿಯಿಂದ ಕೇಳಬೇಡಿ. ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ ಎಂದು ವೈಯಕ್ತಿಕವಾಗಿ ಏಕವಚನದಲ್ಲಿಯೇ  ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಆಕಸ್ಮಿಕವಾಗಿ ಅತಿಥಿಯಾಗಿ ಬಂದರು. ಚುನಾವಣೆಯಲ್ಲಿ ಗೆದ್ದರು ನಂತರ ಹೋದರು. ನಾನು ತಾಲೂಕಿನಲ್ಲಿ ಯಾರ ಜಮೀನನ್ನು ಹೊಡೆದಿಲ್ಲ, ಆ ರೀತಿಯ ಆಪಾದನೆ ನನ್ನ ಮೇಲಿಲ್ಲ. ಆದರೆ ಕುಮಾರಸ್ವಾಮಿ ಮೇಲೆ ಬಿಡದಿಯಲ್ಲಿ ದಲಿತರ ಜಮೀನು ಹೊಡೆದುಕೊಂಡರು ಎಂಬ ಅಪಾದನೆ ಇದೆ. ಬಿಡದಿಯಲ್ಲಿ ಬಂಗಲೆ ಕಟ್ಟಿದ್ದಾನಲ್ಲ ಅದು ದಲಿತರ ಜಮೀನು ಎಂಬ ಆಪಾದನೆ ಇದೆ. ನಾಲಿಗೆ ಬಿಗಿಹಿಡಿದು ಮಾತಾಡಪ್ಪ, ಇಲ್ಲ ಬಹಿರಂಗವಾಗಿ ಚರ್ಚೆಗೆ ಬಾ ಎಂದಿದ್ದೇನೆ ಎಂದು ಕಿಡಿಕಾರಿದ್ದಾರೆ. ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ. ನನ್ನ ಬಗ್ಗೆ ಹತಾಷೆಯಿಂದ ಮಾತನಾಡುತ್ತಿದ್ದಾನೆ. ಕುಮಾರಸ್ವಾಮಿಗೆ ನಮ್ಮ ಪಕ್ಷದವರೇ ರಾಜಕೀಯವಾಗಿ ಸಪೋರ್ಟ್ ಕೊಡುತ್ತಿದ್ದಾರೆ. ಅವನನ್ನು ಸಿಕ್ಕಾಪಟ್ಟೆ ಹೊಗಳುವ ಅವಶ್ಯಕತೆ ಇಲ್ಲ. ಅವನು ಜನಾಭಿಪ್ರಾಯ ಕಳೆದುಕೊಂಡಿರುವ ವ್ಯಕ್ತಿ. ನಮ್ಮ ಪಕ್ಷದ ನಾಯಕರಿಗೆ ಬುದ್ಧಿ ಇಲ್ಲ, ಅವನನ್ನ ಓಲೈಸುತ್ತಾರೆ, ಇದರಲ್ಲಿ ಅರ್ಥವಿಲ್ಲ ಎಂದಿದ್ದಾರೆ


Spread the love

About Laxminews 24x7

Check Also

ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ

Spread the love ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ